ಕಾಸರಗೋಡು: ಓಣಂ ಹಬ್ಬದ ವೇಳೆ ತೂಕ-ಅಳತೆಯಲ್ಲಿ ವಂಚನೆ ನಡೆಸಿ ವ್ಯಾಪಾರ ನಡೆಸುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಲೀಗಲ್ ಮೆಟ್ರಾಲಜಿ ಇಲಾಖೆ ಪ್ರತ್ಯೇಕ ಮಿಂಚಿನ ತಪಾಸಣೆ ನಡೆಸಲಿದೆ. ಈ ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಆ.28 ರಿಂದ ಸೆ.2 ವರೆಗೆ ನಿಯಂತ್ರಣ ಕೊಠಡಿಗಳಿಗೆ ಕರೆಮಾಡಿ ಮಾಹಿತಿ ನೀಡಬಹುದು. ಕಾಸರಗೋಡು ತಾಲೂಕು: 8281698129, 8281698130. ಮಂಜೇಶ್ವರ ತಾಲೂಕು: 9400064094, ಕಾಞಂಗಾಡು ತಾಲೂಕು: 8281698131, ವೆಳ್ಳರಿಕುಂಡ್ ತಾಲೂಕು:9400064093.

