HEALTH TIPS

ಕಂಟೈ ನ್ಮೆಂಟ್ ಝೋನ್ ಗಳಲ್ಲೂ ಸರ್ಕಾರಿ ಕಚೇರಿಗಳ ಚಟುವಟಿಕೆಗಳಿಗೆ ವಿಳಂಬ ಸಲ್ಲದು- ಕ್ವಾರೆಂಟೈನ್ ಕಾರಣ ತಿಳಿಸಿ ಸಿಬ್ಬಂದಿ ಕಚೇರಿಗಳಿಗೆ ಹಾಜರಾಗದೇ ಉಳಿಯುವ ಕ್ರಮವನ್ನು ಒಪ್ಪಿಕೊಳ್ಳುವುದು ಅಸಾಧ್ಯ : ಜಿಲ್ಲಾಧಿಕಾರಿ

  

           ಕಾಸರಗೋಡು: ಕಂಟೈ ನ್ಮೆಂಟ್ ಝೋನ್ ಗಳಲ್ಲೂ ಸರ್ಕಾರಿ ಕಚೇರಿಗಳ ಚಟುವಟಿಕೆಗಳಿಗೆ ವಿಳಂಬ ಸಲ್ಲದು. ಕ್ವಾರೆಂಟೈನ್ ಕಾರಣ ತಿಳಿಸಿ ಸಿಬ್ಬಂದಿ ಕಚೇರಿಗಳಿಗೆ ಹಾಜರಾಗದೇ ಉಳಿಯುವ ಕ್ರಮವನ್ನು ಒಪ್ಪಿಕೊಳ್ಳುವುದು ಅಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. 

        ಗುರುವಾರ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿಯ ವೀಡಿಯೋ ಕಾನ್ಪರೆನ್ಸ್ ನಲ್ಲಿ ಅವರು ಈ ವಿಚಾರ ಪ್ರಕಟಿಸಿದರು. 

        ಯಾವುದಾದರೂ ಕಚೇರಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾದಲ್ಲಿ ಆರೋಗ್ಯ ಇಲಾಖೆಯ ಆದೇಶ ಪ್ರಕಾರ ಮಾತ್ರ ಆ ವ್ಯಕ್ತಿಯ ನೇರ ಸಂಪರ್ಕ ಹೊಂದಿರುವವರು( ಒಂದೂವರೆ ಮೀಟರ್ ಗಿಂತ ಮಡಿಕೆ ಅಂತರದಲ್ಲಿ 15 ನಿಮಿಷಕ್ಕಿಂತ ಅಧಿಕ ಅವಧಿಯಲ್ಲಿ ನೇರ ಸಂಪರ್ಕಹೊಂದಿದ್ದರೆ ಮಾತ್ರ) 14 ದಿನಗಳ ಕ್ವಾರೆಂ ಟೈನ್ ಗೆ ತೆರಳಬೇಕು. ಇದೇ ವೇಳೆ 24 ತಾಸುಗಳ ನಂತರ ರೋಗಾಣುನಾಶ ಪ್ರಕ್ರಿಯೆ ನಡೆಸಿ ಕಚೇರಿ ಚಟುವಟಿಕೆ ಪುನರಾರಂಭಿಸಬೇಕು ಎಂದವರು ನುಡಿದರು.  

         ಓಣಂ ಆಚರಣೆ ಸಂಬಂಧ ಪೇಟೆಗಳಲ್ಲಿ ಸಂಚರಿಸುವ ವಾಹನಗಳನ್ನು ಆರ್.ಟಿ.ಒ. ಕಡ್ಡಾಯ ತಪಾಸಣೆಗೊಳಪಡಿಸಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸಭೆಯಲ್ಲಿ ತಿಳಿಸಿದರು. ಆರ್.ಟಿ.ಒ. ಸಾಧಾರಣ ಗತಿಯಲ್ಲಿ ನಡೆಸುವ ತಪಾಸಣೆಯಲ್ಲದೆ, ವಾಹನಗಳಲ್ಲಿ 65 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ, 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ಇವರು ಇರುವುದು ಹೌದಾದಲ್ಲಿ ಮರಳಿ ಕಳುಹಿಸಬೇಕು ಎಂದವರು ತಿಳಿಸಿದರು. 

        ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಗಿ ವಿದೇಶಗಳಿಂದ, ಇತರ ರಾಜ್ಯಗಳಿಂದ ಬಂದವರ ತಪಾಸಣೆಗೆ ಕಾಲಿಕ್ಕಡವಿನಲ್ಲಿ ಸ್ಥಾಪಿಸಲಾಗಿದ್ದ ಚೆಕ್ ಪೆÇೀಸ್ಟ್, ವಿಮಾನನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನೇಮಿಸಲಾಗಿದ್ದ ಲೈಸನ್ ಅಧಿಕಾರಿಗಳ ಚಟುವಟಿಕೆಗಳನ್ನು ಆ.31ರ ನಂತರ ಮುಂದುವರಿಸಬೇಕಿಲ್ಲ ಎಂದು ಸಭೆ ತೀರ್ಮಾನಿಸಿದೆ. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಚೆಕ್ ಪೆÇೀಸ್ಟ್ ನ ಟ್ರಾಪ್ ಪಾಯಿಂಟ್ ಕಾಸರಗೋಡು, ಕಾಞಂಗಾಡು ಪೇಟೆಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. 

        ತ್ರಿಕರಿಪುರ-ಪಯ್ಯನ್ನೂರು ರಸ್ತೆಯ ಮೂಲಕ ವ್ಯಾಪಾರಿಗಳು, ಕಾರ್ಮಿಕರು ಮೊದಲಾದವರು ಕಣ್ಣೂರು ಜಿಲ್ಲೆಗೆ ತೆರಳುವ ಮತ್ತು ಮರಳುವ ಅನುಮತಿ ನೀಡಿಲ್ಲ ಎಂಬ ಬಗ್ಗೆ ದೂರುಗಳು ಕೇಳಿಬರುತ್ತಿವೆ ಎಂದು ಹೆಚ್ಚುವರಿ ದಮಡನಾಧಿಕಾರಿ ಎನ್.ದೇವಿದಾಸ್ ಸಭೆಯಲ್ಲಿ ತಿಳಿಸಿದರು. ಈ ವಿಚಾರವನ್ನು ಕಣ್ಣೂರು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

            ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries