ಕಾಸರಗೋಡು: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಉದಯಗಿರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಮಹಿಳಾ ಹಾಸ್ಟೆಲ್ ಕಂ ಕೆರಿಯರ್ ಗೈಡೆನ್ಸ್ ಸೆಂಟರ್ ನ ನವೀಕೃತ ಕಟ್ಟಡ ಉದ್ಘಾಟನೆಗೊಂಡಿದೆ.
ಅತಿಥಿಗಳ ಸಹಿತ ಏಕಕಾಲಕ್ಕೆ 70 ಮಂದಿ ತಗಬುದಾದ ಸೌಲಭ್ಯ, ಭೋಜನಾಲಯ ಸೌಲಭ್ಯ ಇಲ್ಲಿದೆ. ಕಲಿಕೆ, ನೌಕರಿ ಸಂಬಂಧ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಮಹಿಳೆಯರಿಗೆ ಈ ಹಾಸ್ಟೆಲ್ ದೊಡ್ಡ ಆಸರೆಯಾಗಲಿದೆ. ಜೊತೆಗಿರುವ ಕೆರಿಯರ್ ಗೈಡೆನ್ಸ್ ಸೆಂಟರ್ ನೌಕರಿ ಅವಕಾಶಗಳನ್ನು ಒದಗಿಸುವಲ್ಲಿ ಹೆನ್ಣುಮಕ್ಕಳಿಗೆ ಸಹಕಾರಿಯಾಗಲಿದೆ.
ಈ ಸಂಬಂಧ ನಡೆದ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾತಮ್ಮಾ ಫಿಲಿಪ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ನ್ಯಾಯವಾದಿ ಎ.ಪಿ.ಉಷಾ, ಷಾನವಾಝ್ ಪಾದೂರು ಮೊದಲಾದವರು ಉಪಸ್ಥಿತರಿದ್ದರು.


