ಮಂಜೇಶ್ವರ: ಕರೋನ ತಡೆಗಟ್ಟಲೂ ಪ್ರತಿಯೊಬ್ಬರೂ ವ್ಯಾಪಾರ ಸಂಸ್ಥೆಗಳಲ್ಲಿ ಸರ್ಕಾರದ ನಿರ್ದೇಶನ ಕಡ್ಡಾಯವಾಗಿ ಪಾಲಿಸಿಕೊಂಡು ಸಹಕರಿಸಬೇಕೆಂದು ವಿಶೇಷ ವಿನಂತಿಯೊಂದಿಗೆ ಮಂಜೇಶ್ವರದ ವಿವಿಧೆಡೆಯ ಪೇಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ "ಕೋವಿಡ್ ಸಂದೇಶ" ಜಾಥಕ್ಕೆ ಗುರುವಾರ ಅಪರಾಹ್ನ ಬಳಿಕ ಚಾಲನೆ ನೀಡಲಾಗಿದೆ.
ಕೇರಳ ಪೆÇೀಲಿಸ್ ಇಲಾಖೆ ಹಾಗೂ ಸರ್ಕಾರದ ನಿರ್ದೇಶನ ಪ್ರಕಾರ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಆಶ್ರಯದಲ್ಲಿ ಕರೋನ "ವೈರಸ್ ಸೋಂಕನ್ನು ತಡೆಗಟ್ಟಲು ನಮ್ಮೊಂದಿಗೆ ಸಹಕರಿಸಿ" ಎಂಬ ಘೋಷ ವಾಕ್ಯದೊಂದಿಗೆ ಕೋವಿಡ್ ಸಂದೇಶ ಜಾಥ ಆರಂಭಗೊಂಡಿತು.
ಅಂಗಡಿಯಲ್ಲಿ ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು, ಸಾನಿಟೈಸರ್ ನಲ್ಲಿ ಕೈ ತೊಳೆಯಬೇಕು,ಸಂಯಮ ಪಾಲಿಸಬೇಕು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಈ ಮಾಹಿತಿ ಸಂದೇಶ ಜಾಥಾದ ಮೂಲಕ ಸಾರಲಾಗುತ್ತದೆ.
ಸಮಿತಿಯ ಕಚೇರಿಯಿಂದ ಆರಂಭಗೊಂಡ ಜಾಥಕ್ಕೆ ಘಟಕದ ಅಧ್ಯಕ್ಷ ಬಶೀರ್ ಕನಿಲ ಸಂಘಟನೆಯ ಪತಾಕೆಯನ್ನು ಬೀಸಿ ಚಾಲನೆ ನೀಡಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಮಚೆರ್ಂಟ್ ವೆಲ್ಫೆರ್ ಸೊಸೈಟಿ ಅಧ್ಯಕ್ಷ ಕೃಷ್ಣ ಶೆಟ್ಡಿಗಾರ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರ.ಕಾರ್ಯದರ್ಶಿ ದಯಾನಂದ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಿ ವನಿತಾ ವಿಂಗ್ ನ ಅಧ್ಯಕ್ಷೆ ಕುಮುದಾ ರಾಜನ್, ಉಪಾಧ್ಯಕ್ಷ ಹಮೀದ್ ಹೊಸಂಗಡಿ ಮೊದಲಾದವರು ಪಾಲ್ಗೊಂಡಿದ್ದರು. ಕೋಶಾಧಿಕಾರಿ ಹಸೈನಾರ್ ಉದ್ಯಾವರ ವಂದಿಸಿದರು.
ಸಂದೇಶ ಜಾಥವು ಹೊಸಂಗಡಿ ಪೇಟೆ,ತಲಪಾಡಿ, ಕುಂಜತ್ತೂರು, ತೂಮಿನಾಡು,ಉದ್ಯಾವರ ಮಾಡ, ಮಂಜೇಶ್ವರ ರಾಗಂ ಜಂಕ್ಷನ್, ಮಂಜೇಶ್ವರ ಒಳಪೇಟೆ, ಹೊಸಬೆಟ್ಟು, ಮೀಯಪದವು, ಚಿಗುರುಪಾದೆ, ಕಡಂಬಾರ್ ಮೊದಲಾದ ಪ್ರದೇಶದಲ್ಲಿ ಸಾಗುತ್ತಿದ್ದು ಒಂದು ವಾರಗಳ ಕಾಲ ವಿವಿದೆಡೆಗಳಿಗೆ ಸಂಚರಿಸಲಿದೆ. ಪೇಟೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಂದೇಶವನ್ನು ಸಾರಲಾಗುತ್ತಿದೆ.
ಸಂದೇಶ ಜಾಥಕ್ಕೆ "ಶೆರಿಫ್" ಸಾರಥ್ಯ....!:
ವಿವಿಧೆಡೆಗಳಲ್ಲಿ ಸಂಚರಿಸಲಿರುವ ಜಾಥಾಕ್ಕೆ ಸಾರಥಿಯಾಗಿ ಉಪ್ಪಳ ಪಚ್ಲಂಪಾರೆ ನಿವಾಸಿ ಶೇರಿಫ್ ಎಂಬವರನ್ನು ಆರಿಸಲಾಗಿದೆ. ಯು.ಎಂ.ಮೊಹಮ್ಮದ್ - ಫಾತಿಮ್ಮ ದಂಪತಿಗಳ ಪುತ್ರನಾದ ಶೇರಿಫ್ ಅವರು ಕಳೆದ 20 ವರ್ಷಗಳಿಂದ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಉದ್ಯಮ ನಡೆಸುತ್ತಿದ್ದು ಈ ನಡುವೆ ಇಂತಹ ಹಲವು ಪ್ರಚಾರ ಸಂದೇಶ ಜಾಥಕ್ಕೆ ನೇತೃತ್ವ ನೀಡಿ ಗಮನ ಸೆಳೆದಿದ್ದಾರೆ. ತಮ್ಮ ಬೈಕ್ ನಲ್ಲಿ ನೂರು ವಾಟ್ಸ್ ಧ್ಚನಿವರ್ಧಕ ಅಳವಡಿಸಿ ಸುರಿಯುವ ಮಳೆಗೂ ಯಾವುದೇ ಹಾನಿಯಾಗದ ರೀತಿಯಲ್ಲಿ ವಿಶೇಷ ವ್ಯವಸ್ಥೆ ಸಜ್ಜುಗೊಳಿಸಿ ಇವರು ಸಂದೇಶ ಪ್ರಚುರಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 4 ವರ್ಷಗಳಿಂದ ಪೈವಳಿಕೆ ಬೋಳಂಗಳದ ಅಣ್ಣ ತಮ್ಮ ಕಂಬಳದ, ಮಂಜೇಶ್ವರ ಅಸುಪಾಸಿನ ಉರೂಸು, ಇನ್ನಿತರ ಎಲ್ಲಾ ಕಾರ್ಯಕ್ರಮ, ಆರೋಗ್ಯ,ಶುಚಿತ್ವ ಮೊದಲಾದ ಸಂದೇಶಗಳನ್ನು ಬಿತ್ತರಿಸುತ್ತಾ ಜಾತಿ ಮತ ಧರ್ಮ ಬೇಧವಿಲ್ಲದ ಕಾರ್ಯಕ್ರಮಗಳ ಪ್ರಚಾರ ಪಡಿಸುವಲ್ಲಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.



