ಮಂಜೇಶ್ವರ: ತಿರುವನಂತಪುರ ಸೆಕ್ರೆಟೆರಿಯಟ್ ನಲ್ಲಿ ಬೆಂಕಿ ಅವಘಡದ ಕಳ್ಳ ನೆಪ ಸೃಷ್ಠಿಸಿ ಚಿನ್ನ ಕಳ್ಳ ಸಾಗಾಣಿಕೆ ಸಹಿತ ಅನೇಕ ದಾಖಲೆಗಳಿರುವ ಸಾಕ್ಷ್ಯಗಳನ್ನು ನಾಶಪಡಿಸಲೆತ್ನಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಬಹಿರಂಗ ಪ್ರತಿಭಟನೆ ನಡೆಸಿತು.
ತಿರುವನಂತಪುರದ ಸೆಕ್ರೆಟರಿಯೇಟ್ ಸ್ಥಳಕ್ಕೆ ಬೇಟಿ ನೀಡಿದ ಬಿ.ಜೆ.ಪಿ ರಾಜ್ಯಾದ್ಯಕ್ಷ ಕೆ. ಸುರೆಂದ್ರನ್ ಅವರನ್ನು ಬಂಧಿಸಿದ ಪ್ರಕರಣವನ್ನು ಖಂಡಿಸಿ ಬಿ.ಜೆ.ಪಿ ಮತ್ತು ಯುವಮೋರ್ಚಾ ಮಂಜೇಶ್ವರ ವತಿಯಿಂದ ಬುಧವಾರ ಸಂಜೆ ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಯಿತು.
ಮಂಡಲ ಅಧ್ಯಕ್ಷ ಮಣಿಕಂಠ ರೈ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಬಾಬು ಮಾಸ್ತರ್ ಉದ್ಯಾವರ ವಹಿಸಿದ್ದರು.ಈ ಸಂದರ್ಭದಲ್ಲಿ ಪಕ್ಷದ ನೇತಾರರಾದ ಪದ್ಮನಾಭ ಕಡಪ್ಪರ, ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಆದರ್ಶ್ ಬಿ.ಎಂ, ಅವಿನಾಶ್ ಹೆಗ್ಡೆ ಮಂಜೇಶ್ವರ, ದೇವರಾಜ್ ಎಂ.ಎಸ್ ಅಂಗಡಿಪದವು, ಯಶಪಾಲ್ ಉದ್ಯಾವರ, ಯಶ್ ರಾಜ್ ಉದ್ಯಾವರ, ಗುರು ಕಿರಣ್ ಕಾಳಿಕಾಂಬ, ಪವನ್ ತೂಮಿನಾಡು, ದಯಾ ಪ್ರಸನ್ನ ಆಚಾರ್ಯ ಮೊದಲಾದವರು ಭಾಗವಹಿಸಿದ್ದರು.


