ಕುಂಬಳೆ: ಕಾವ್ಯ ದೀಪ ಕಲಾ ಸಾಹಿತ್ಯ ವೇದಿಕೆ ಕುಂಬಳೆ ಇವರು, ಶ್ರೀ ಗಣೇಶೋತ್ಸವದ ಅಂಗವಾಗಿ
ಗೂಗಲ್ ಮೀಟ್ ಅಂತರ್ಜಾಲದ ನೇರಪ್ರಸಾರ ಕವಿಗೋಷ್ಠಿಯನ್ನು ಆ. 23 ರಂದು ಆಯೋಜಿಸಿದ್ದರು.
ಇದು ಅಂತರ್ಜಾಲದಲ್ಲಿ ನಡೆದ ನೇರಪ್ರಸಾರದ ಕವಿಗೋಷ್ಠಿಯಾಗಿದ್ದು ಸುಮಾರು 22 ಕವಿಗಳು ಭಾಗವಹಿಸಿದ್ದು ಕೊರೊನಾದ ಈ ಕಾಲಘಟ್ಟದಲ್ಲಿ
ಅಂತರ್ಜಾಲದ ನೇರಪ್ರಸಾರದ ಕವಿಗೋಷ್ಠಿಯನ್ನು ಆಯೋಜಿಸಿ ಕವಿ ಮನಸುಗಳನ್ನು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆಯನ್ನು ಏರ್ಪಡಿಸಲಾಗಿತ್ತು.
ಎಸ್ ಕೆ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿತೇಶ್ ಕುಮಾರ್ ಅವರು ಚಾಲನೆ ನೀಡಿದರು. ಕಮಲಾಕ್ಷಿ ಕೌಜಲಗಿ ವಂದಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್ ವಿ ಮಹೇಶ್ ಅವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಕವಿಗೋಷ್ಠಿಯು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಮೀಳಾ ಚುಳ್ಳಿಕ್ಕಾನ ಹಾಗೂ ಅಧ್ಯಕ್ಷ ಕೃಷ್ಣ ಪ್ರದೀಪ ಶೇಡಿಗುಮ್ಮೆ (ಕಣಿಪುರೇಶಪ್ರಿಯ)
ಅವರ ಸಹಕಾರದೊಂದಿಗೆ ನಡೆಯಿತು.

