ಕುಂಬಳೆ: ಕಾವ್ಯ ದೀಪ ಸಾಹಿತ್ಯ ಕಲಾ ವೇದಿಕೆ ಇವರು ಭಾರತದ ಸ್ವಾತಂತ್ರ್ಯದಿನದ ಸಲುವಾಗಿ ಏರ್ಪಡಿಸಿದ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ದೇಶದ ವಿವಿಧ ಕಡೆಗಳಿಂದ ಮತ್ತು ವಿದೇಶದಿಂದಲೂ ಸಮಾರು 250ಕ್ಕೂ ಮಿಕ್ಕ ಕನ್ನಡಿಗ ಕವಿಗಳು ಭಾಗವಹಿಸಿರುವುದು ವಿಶೇಷವಾಗಿತ್ತು.
ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪ್ರಥಮ ಬಹುಮಾನ ಪದ್ಮಾ ಆಚಾರ್ಯ (ನಗದು 2000 ರೂ ಮತ್ತು ಪ್ರಶಸ್ತಿ ಪತ್ರ),
ದ್ವಿತೀಯ ಕಲಾರತ್ನ ಶಂನಾ. ಅಡಿಗ ಕುಂಬಳೆ (ನಗದು 1000 ರೂ ಮತ್ತು ಪ್ರಶಸ್ತಿ ಪತ್ರ), ತೃತೀಯ ಮನೋಜ್ ಕುಮಾರ್ (ನಗದು 500 ರೂ ಮತ್ತು ಪ್ರಶಸ್ತಿ ಪತ್ರ).
ಇವರುಗಳಲ್ಲದೆ ಏಳು ಮಂದಿ ಕವಿ /ಕವಯತ್ರಿಗಳಿಗೆ ಪೆÇ್ರೀತ್ಸಾಹಕ ಬಹುಮಾನವನ್ನು ನೀಡಲಾಗಿದೆ.ಪೆರ್ಮುಖ ಸುಬ್ರಮಣ್ಯ ಭಟ್, ಅನ್ವಿತಾ ತಲ್ಪನಾಜೆ, ವೈಲೇಶ್ ಪಿ ಎಸ್ ಕೊಡಗು, ತೃಪ್ತಿ ಜಿ, ಲಕ್ಷ್ಮಿ ವಿ ಭಟ್.ಮಂಜೇಶ್ವರ, ಸಿದ್ದರಾಯಪ್ಪ ಖಾನಾಪುರ ಮತ್ತು ಲೀಲಾಧರ ನಾರಾಯಣ ಮೊಗೇರ ಸಮಧಾನಕರ ಬಹುಮಾನಗಳನ್ನು ಪಡೆದರು. .
ಈ ಸ್ಪರ್ಧೆಯನ್ನು ಕಾವ್ಯ ದೀಪ ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ವಿ.ಮಹೇಶ ಇವರು ಆಯೋಜಿಸಿದ್ದರು. ಸ್ಪರ್ಧೆಯ ಬಹುಮಾನಗಳನ್ನು ಕಾವ್ಯದೀಪ ಸಾಹಿತ್ಯ ಕಲಾ ವೇದಿಕೆಯ ಅಧ್ಯಕ್ಷ ಕೃಷ್ಣ ಪ್ರದೀಪ ಶೇಡಿಗುಮ್ಮೆ (ಕಣಿಪುರೇಶ ಪ್ರಿಯ ), ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ವಿ.ಮಹೇಶ ಮತ್ತು ವೇದಿಕೆಯ ಸಂಸ್ಥಾಪನ ಅಧ್ಯಕ್ಷೆ ಪ್ರಮೀಳಾ ಚುಳ್ಳಿಕಾನ ಅವರು ಪ್ರಾಯೋಜಿಸಿದ್ದರು.

