ಬದಿಯಡ್ಕ: 60 ವರ್ಷ ದಾಟಿದ ಭಾರತದ ಎಲ್ಲಾ ಪ್ರಜೆಗಳಿಗೂ ರೂಪಾಯಿ 10000 ಪ್ರತೀ ತಿಂಗಳು ಪೆನ್ಶನ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಬದಿಯಡ್ಕದಲ್ಲಿ ಒನ್ ಇಂಡಿಯಾ ಒನ್ ಪೆನ್ಶನ್ ಪಂಚಾಯಿತಿ ಸಮಿತಿಯ ರೂಪುಗೊಂಡಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.
ಬುಧವಾರ ಬದಿಯಡ್ಕ ಪೇಟೆಯಲ್ಲಿ ಸಮಾನ ಮನಸ್ಕ ಪ್ರಜೆಗಳು ಒಂದುಗೂಡಿ ಪೇಟೆಯಲ್ಲಿ ಕರಪತ್ರ ವಿತರಿಸಿದರು. ನೀರ್ಚಾಲು, ಕನ್ನೆಪ್ಪಾಡಿ ಮೊದಲಾದೆಡೆಗಳಲ್ಲೂ ಕರೊಪತ್ರವನ್ನು ಹಂಚಿ ಜನರ ಅಭಿಪ್ರಾಯ ಸಂಗ್ರಹಿಸಲಾಯಿತು. ಆಂದೋಲನಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಅಪ್ಪುರಾಜ್, ಕಾರ್ಯದರ್ಶಿ ಬಿಜು ಅಬ್ರಹಾಂ, ಶಾಜಿ ಪಡನಮಕ್ಕಲ್, ಅಬ್ದುಲ್ ರಹ್ಮಾನ್ ಹಾಜಿ ಚೆಡೆಕಲ್ಲು, ಸಂಶುದ್ದೀನ್, ಕೃಷ್ಣನ್ ಕೆ.ಕೆ.ಸ್ವಾಮಿಕೃಪಾ, ಜೋಸ್ ಪಣಿಕ್ಕರ್, ಜೋಸ್ ಕುಟ್ಟಿ, ಕಿಶೋರ್ ಕುಮಾರ್ ಕರಪತ್ರ ವಿತರಣೆಗೆ ನೇತೃತ್ವವನ್ನು ನೀಡಿದ್ದರು.


