HEALTH TIPS

ಕುಂಬಳೆಯಲ್ಲಿ ವ್ಯಾಪಾರಿ ಸಂಘದ ಓಣಂ ಮೇಳ ಆರಂಭ-ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟನೆ


       ಕುಂಬಳೆ: ಓಣಂ ಹಬ್ಬಾಚರಣೆಯ ಹಿನ್ನೆಲೆಯಲ್ಲಿ ಕುಂಬಳೆ ಮೀಪಿರಿ ಕೇಂದ್ರದಲ್ಲಿ ಮೀಪಿರಿ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಓಣಂ ಮಾರುಕಟ್ಟೆ ಮೇಳವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಗುರುವಾರ ಉದ್ಘಾಟಿಸಿದರು. ಹತ್ತು ದಿನಗಳ ವರೆಗೆ ನಡೆಯಲಿರುವ ಓಣಂ ಮೇಳದಲ್ಲಿ ಅಗತ್ಯ ವಸ್ತುಗಳು ಸೇರಿದಂತೆ ಇತರ ವಿಶೇಷ ವಸ್ತುಗಳೂ ಶೇ 40 ರಷ್ಟು ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ. 

         ಸಮಾರಂಭದಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕುಂಬಳೆ ಘಟಕಾಧ್ಯಕ್ಷ ವಿಕ್ರಮ್ ಪೈ, ಪ್ರಧಾನ ಕಾರ್ಯದರ್ಶಿ ಸತ್ತರ್ ಆರಿಕ್ಕಾಡಿ, ಖಜಾಂಜಿ ಅನ್ವರ್ ಸಿಟಿ, ನಾಸಿರ್ ಮೊಗ್ರಾಲ್, ಹಮೀದ್ ಕಾಪಿಲ್, ಮೊಹಮ್ಮದ್ ಸ್ಮಾರ್ಟ್, ಮೀಪಿರಿ ವ್ಯಾಪಾರಿ ಸಂಘದ ಸದಸ್ಯರು   ಉಪಸ್ಥಿತರಿದ್ದರು. ವ್ಯಾಪಾರಿ ಸಂಘದ ಪದಾಧಿಕಾರಿಗಳು ಸಂಸದರು ಮತ್ತು ಪಂಚಾಯತ್ ಅಧ್ಯಕ್ಷರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries