ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮೀನುಮಾರಾಟ ನಡೆಸುವ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಕೀಯೂರು, ನೆಲ್ಲಿಕುಂಜೆ ಕರಾವಳಿಗಳ ದೇವಾಲಯ ಸ್ಥಾನಿಕರ ಮತ್ತು ಮೀನುಗಾರರ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೀಯೂರು, ನೆಲ್ಲಿಕುಂಜೆ ಕ್ಲಸ್ಟರ್ ಗಳಲ್ಲಿ, ಕರಾವಳಿ ಪ್ರದೇಶಗಳಲ್ಲಿ ಅನಿವಾರ್ಯ ಸಾಮಾಗ್ರಿಗಳು, ಔಷಧಗಳ ವಿತರಣೆಗಾಗಿ ಬ್ಯಾಂಕ್ ಗಳಿಂದ ಹಣ ಪಡೆದು ನೀಡಲು 25-45 ವರ್ಷ ಪ್ರಾಯದ 30 ಮಂದಿ ಯುವಜನತೆಯನ್ನು ಪೆÇಲೀಸ್ ಸ್ವಯಂಸೇವಕರು ಎಂಬುದಾಗಿ ಬ್ಯಾಡ್ಜ್ ನೀಡಿ ನೇಮಿಸುವಂತೆ ಸಭೆ ಆದೇಶಿಸಿದೆ. ಆಂಟಿಜೆನ್ ಟೆಸ್ಟ್ ನಲ್ಲಿ ನೆಗೆಟಿವ್ ಫಲಿತಾಂಶ ಬಂದವರನ್ನು ಈ ನಿಟ್ಟಿನಲ್ಲಿ ನೇಮಕಗೊಳಿಸಲಾಗುವುದು.
ಕ್ಲಸ್ಟರ್ ಗಳಿಂದ ಕಾರ್ಮಿಕರು ಮೀನುಗಾರಿಕೆಗೆ ತೆರಳುವ ಬಗ್ಗೆ ತಡೆಯಿಲ್ಲ. ಆಂಟಿಜೆನ್ ಟೆಸ್ಟ್ ನಡೆಸಿದವರಿಗೆ ಯಾವ ದಡದಲ್ಲೂ ಮರಳಬಹುದು. ತಪಾಸಣೆಗೊಳಪಡದೇ ಇರುವವರು ಯಾವ ದಡದಿಂದ ಸಮುದ್ರಕ್ಕೆ ತೆರಳಿದ್ದರೋ, ಅದೇ ಕಡೆ ಮರಳಬೇಕು. ಕ್ಲಸ್ಟರ್ನಲ್ಲಿರುವವರು ನೌಕರಿ ಸಂಬಂಧ ಕಾಸರಗೋಡು, ಕಾಞಂಗಾಡು ಪ್ರದೇಶಗಳಿಗೆ ತೆರಳುವುದಕ್ಕೆ ತಡೆಯಿಲ್ಲ. ಆದರೆ ಅವರು ನೌಕರಿಗೆ ತೆರಳುವ ಮುನ್ನ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಲಾಗಿದೆ.
ಕರಾವಳಿ ಪ್ರದೇಶದಲ್ಲಿ ನಡೆಸುವ ಕೋವಿಡ್ ನಿಯಂತ್ರಣ ಚಟುವಟಿಕೆಗಳಿಗೆ ಸಭೆ ಏಕಕಂಠದ ಬೆಂಬಲ ಸೂಚಿಸಿದೆ. ಕಾಸರಗೋಡು ಡಿ.ವೈ.ಎಸ್.ಪಿ.ಬಾಲಕೃಷ್ಣನ್ ನಾಯರ್ ಪಿ., ಮೇಲ್ಪರಂಬ ಸಿ.ಐ.ಬೆನ್ನಿ ಲಾಲು ಮೊದಲಾದವರು ಉಪಸ್ಥಿತರಿದ್ದರು.


