HEALTH TIPS

ಮಾಸ್ಟರ್ ಯೋಜನೆಯನ್ನು ಯಶಸ್ವಿಗೊಳಿಸಿದ ಪಿಲಿಕೋಡ್ ಗ್ರಾಮಪಂಚಾಯತ್

  

   ಕಾಸರಗೋಡು: ಪಿಲಿಕೋಡ್ ಗ್ರಾಮಪಂಚಾಯತ್ ಮಾಸ್ಟರ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. 

       ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಶಿಕ್ಷಕರನ್ನು ಪರಿಪೂರ್ಣ ರೂಪದಲ್ಲಿ ತೊಡಗಿಸಿಕೊಳ್ಳಲು ರಚಿಸಿರುವ ಯೋಜನೆಯೇ ಮಾಸ್ಟರ್. ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ವೇಳೆ ಜನತೆಯ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್, ಸಾನಿಟೈಸರ್ ಬಳಸುವ ಇತ್ಯಾದಿ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತಾದ ಜಾಗೃತಿ ಮೂಡಿಸುವಲ್ಲಿ ಅಧ್ಯಾಪಕ, ಅಧ್ಯಾಪಕಿಯರನ್ನು ಸಮರ್ಥವಾಗಿ ಬಳಸಿಕೊಂಡು ಪಿಲಿಕೋಡ್ ಗ್ರಾಮ ಪಂಚಾಯತ್ ಇತರರಿಗೆ ಮಾದರಿಯಾಗಿದೆ. ಇಲ್ಲಿನ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಬೆಂಬಲವೂ ಇವರಿಗಿದೆ. 

         ಕೋವಿಡ್ ಪ್ರತಿರೋಧ ಸಂಬಂಧ ಆದೇಶಗಳ ಉಲ್ಲಂಘನೆ ಪತ್ತೆಮಾಡುವ, ಅದಕ್ಕೆ ನಡೆಸಬೇಕಾದ ಕ್ರಮಗಳ ಬಗ್ಗೆ ಶಿಕ್ಷಕರು ನೀಡುವ ಕಾಯಕ ನಡೆಸುತ್ತಾರೆ. ಓಣಂ ಹಬ್ಬದ ದಿನಗಳಲ್ಲಿ ಜನನಿಭಿಡತೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಲ್ಲಿ ಪಾಲಿಸಬೇಕಾದ ಮುಂಜಾಗರೂಕತೆಗಳ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದಾರೆ. 

      ಮಾಸ್ಟರ್ ಯೋಜನೆಯ ಸ್ವಯಂಸೇವಕರು ಸ್ಥಳೀಯ ಮಟ್ಟದಲ್ಲಿ ಪತ್ತೆಮಾಡುವ ಸಮಸ್ಯೆಗಳನ್ನು ಗ್ರಾಮಪಂಚಾಯತ್ ಮತ್ತು ಪೆÇಲೀಸರಿಗೆ ವರದಿ ಸಲ್ಲಿಸಲಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸದಂತೆ ವಿಶೇಷ ಗಮನಹರಿಸುವರು. ಕಾಸರಗೋಡು ಜಿಲ್ಲೆಯ ದಕ್ಷಿಣ ಗಡಿಪ್ರದೇಶ ಕಾಲಿಕಡವಿನಲ್ಲಿ ಮೂರು ವಾರ್ಡ್ ಗಳಲ್ಲಿ ತಲಾ ಇಬ್ಬರು ಶಿಕ್ಷಕರು ಈ ನಿಟ್ಟಿನಲ್ಲಿ ನೇಮಕಗೊಂಡಿದ್ದಾರೆ. 

      ಕೋವಿಡ್ ಸೋಂಕು ಅಧಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಟರ್ ಯೋಜನೆ ಮೂಲಕ ಜನಜಾಗೃತಿ ಮೂಡಿಸಿ ಸಾಮಾಜಿಕ ಸೋಂಕು ಹರಡುವಿಕೆಯನ್ನು ಗರಿಷ್ಟ ಮಟ್ಟದಲ್ಲಿ ಕುಂಠಿತಗೊಳಿಸಲು ಸಾಧ್ಯವಾಗುವ ನಿರೀಕ್ಷಯಿದೆ ಎಂದು ಗ್ರಾಮಪಂಚಾಯತ್ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries