HEALTH TIPS

ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬದಿಯಡ್ಕದಲ್ಲಿ ಬಾಯಿಮುಚ್ಚಿ ಧರಣಿ

    

        ಬದಿಯಡ್ಕ: ಚಿನ್ನ ಕಳ್ಳ ಸಾಗಾಟದ ಪ್ರಕರಣ ತನಿಖೆ ಮಾಡುವ ಎನ್.ಐ.ಎ ಬೇಡಿಕೆ ಇರಿಸಿದ ಕಡತಗಳನ್ನು ಹೊಂದಿರುವ ಪೆÇ್ರಟೋಕೋಲ್ ಕಾರ್ಯಾಲಯ ಬೆಂಕಿಗೆ ಆಹುತಿಗೊಳಿಸಿ ನಾಶ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜನಾಮೆ ಕೊಡಬೇಕೆಂದು ಒತ್ತಾಯಿಸಿ ಬಡಿಯಡ್ಕ ಮಂಡಲ ಕಾಂಗ್ರೆಸ್ ಕಮಿಟಿಯ ನೇತೃತ್ವದಲ್ಲಿ ಗುರುವಾರ ಸಂಜೆ ಬದಿಯಡ್ಕ ಗ್ರಾಮಾಧಿಕಾರಿಗಳ ಕಚೇರಿ ಮುಂದೆ ಬಾಯಿ ಮುಚ್ಚಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

        ಸತ್ಯಾಗ್ರಹದ ಅಧ್ಯಕ್ಷತೆಯನ್ನು ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ. ಎಮ್ ವಹಿಸಿದ್ದರು. ಬದಿಯಡ್ಕ ಮಂಡಲದ ಹಿರಿಯ ನೇತಾರ ಕಾರಡ್ಕ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಹಾಸ ರೈ ಉದ್ಘಾಟಿಸಿ ಮಾತನಾಡಿ ಕೇರಳದ ಸೆಕ್ರೆಟರಿ ನಲ್ಲಿ ನಡೆದ ಘಟನೆ ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದರು. ತಕ್ಷಣ ಎನ್.ಐ.ಎ. ತನಿಖೆ ನಡೆಸಬೇಕೆಂದು ಆಗ್ರಹಿಸಿದರು. 

       ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ  ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶಾಹಿಲ್ ಹಮೀದ್, ಸಿರಿಲ್ ಡಿಸೋಜ, ವಾರ್ಡ್ ಸಮಿತಿ ಅಧ್ಯಕ್ಷ ಆನಂದ ಮೊದಲಾದವರು ಮಾತನಾಡಿದರು. ಮುಂಡಲ ಪ್ರಧಾನ ಕಾರ್ಯದರ್ಶಿ ಶಿಜು ಜೋರ್ಜ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಶಾಫಿ ಗೋಳಿಯಡ್ಕ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries