HEALTH TIPS

ಸೆಕ್ರೆಟರಿಯಟ್ ಬೆಂಕಿ; ರಾಜ್ಯಪಾಲರ ಮಧ್ಯಪ್ರವೇಶ-ಯಾವುದೇ ವಂಚನಾ ಪ್ರಯತ್ನ ನಡೆದಿಲ್ಲ:ಪೋಲೀಸರು

 

      ತಿರುವನಂತಪುರ: ರಾಜ್ಯ ಸಚಿವಾಲಯದ ನಿರ್ಣಾಯಕ ದಾಖಲೆಗಳಿದ್ದ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿದ್ದಾರೆ.  ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರ ದೂರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದರು.

       ಪರತಿಪಕ್ಷ ನಾಯಕರ ಪತ್ರದಲ್ಲಿ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಘಟನೆಗೆ ಸಂಬಂಧಿಸಿ ಮಧ್ಯಪ್ರವೇಶಿಸುವಂತೆ ಪ್ರತಿಪಕ್ಷ ನಾಯಕ ಬುಧವಾರ ರಾಜ್ಯಪಾಲರಿಗೆ ಸೂಚಿಸಿದ್ದರು. ಘಟನೆ ನಡೆದ ದಿನ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಚೆನ್ನಿತ್ತಲ ಅವರು ಈ ಬಗ್ಗೆ ಸಮಗ್ರ ತನಿಖೆಗೆ ಬೇಡಿಕೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯನ್ನು ಕರೆಸಬೇಕೆಂದು ಅವರು ಒತ್ತಾಯಿಸಿದ್ದರು.

          ಆದರೆ, ಬೆಂಕಿ ಅವಘಡ ಘಟನೆಯ ಹಿಂದೆ ಯಾವುದೇ ವಂಚನೆಯ ಯತ್ನ ನಡೆದಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ. ಇದನ್ನು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಅಸಾಮಾನ್ಯವಾದುದೇನೂ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ಸಂದರ್ಭ (ಸಂಜೆ 5 ಗಂಟೆ)ಯಾರೊಬ್ಬರೂ ಘಟನಾ ಸ್ಥಳದಲ್ಲಿ ಅಥವಾ ಹತ್ತಿರದಲ್ಲಿರಲಿಲ್ಲ. ಮುಚ್ಚಿದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಬಳಿಕ ಯಾರೂ ಕೋಣೆಗೆ ಪ್ರವೇಶಿಸಿರಲಿಲ್ಲ. ಯಾವುದೇ ವಂಚನಾ ಯತ್ನದ ಸೂಚನೆಗಳಿಲ್ಲ ಎಮದು ತಿಳಿದುಬಂದಿದೆ.

        ಎಡಿಜಿಪಿ ಮನೋಜ್ ಅಬ್ರಹಾಂ ನೇತೃತ್ವದ ಪೆÇಲೀಸ್ ತಂಡ ಮತ್ತು ಮುಖ್ಯ ಕಾರ್ಯದರ್ಶಿ ನೇಮಿಸಿದ ತಜ್ಞರ ತಂಡ ಸಚಿವಾಲಯದ ಮಹತ್ವದ ವಿಭಾಗದಲ್ಲಿ ಸಂಭವಿಸಿದ ಬೆಂಕಿಯ ಬಗ್ಗೆ ತನಿಖೆ ನಡೆಸುತ್ತಿದೆ. ಏತನ್ಮಧ್ಯೆ, ಬೆಂಕಿಯ ಹಿಂದೆ ಪಿತೂರಿ ಇದೆಯೇ ಎಂದು ಪರಿಶೀಲಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ವರದಿಗಳಿವೆ.

   ಬೆಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕ ಆಡಳಿತದ ಹೆಚ್ಚುವರಿ ರಾಜ್ಯ ಪೆÇ್ರೀಟೋಕಾಲ್ ಅಧಿಕಾರಿ ಎ.ಪಿ ರಾಜೀವ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಗೆಜೆಟ್ ಅಧಿಸೂಚನೆಗಳ ಪ್ರತಿ ಮತ್ತು ಅತಿಥಿ ಗೃಹಗಳು ನೀಡಿದ ಹಿಂದಿನ ಫೈಲ್‍ಗಳು ಕಳೆದುಹೋಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅತಿಥಿ ಗೃಹಗಳಲ್ಲಿನ ಕೊಠಡಿಗಳನ್ನು ಕಾಯ್ದಿರಿಸುವ ಪೂರ್ವ ಸೂಚನೆಗಳು ಮತ್ತು ದಾಖಲೆಗಳಿಂದ ಬೆಂಕಿಯಲ್ಲಿ ಹಲವು ದಾಖಲೆಗಳು ನಾಶವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries