ಕಾಸರಗೋಡು: ಕೊರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜೆ.ಎಚ್.ಐ.(ಜ್ಯೂನಿಯರ್ ಹೆಲ್ತ್ ಇನ್ಪೆಕ್ಟರ್) ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಈ ಸಂಬಂಧ ಆ.27ರಂದು ಕಾಞಂಗಾಡ್ ಚೆಮ್ಮಟ್ಟಂವಯಲ್ ನಲ್ಲಿರುವ ಜಿಲ್ಲಾ ಮೆಡಿಕಲ್ ಆಫೀಸ್ (ಆರೋಗ್ಯ)ನಲ್ಲಿ ಸಂದರ್ಶನ ನಡೆಯಲಿದೆ. ಪ್ಲಸ್-ಟು ಸಯನ್ಸ್, ಕೇರಳ ಸರಕಾರ ಅಂಗೀಕೃತ ಹೆಲ್ತ್ ಇನ್ಸ್ ಪೆಕ್ಟರ್ ತರಬೇತಿ ತೇರ್ಗಡೆ ಹೊಂದಿರುವಪಾರಾ ಮೆಡಿಕಲ್ ನೋಂದಣಿ ಹೊಂದಿರುವ ಮಂದಿ ಅರ್ಹರಾಗಿದ್ದಾರೆ. 27ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಅಸಲಿ ಅರ್ಹತಾಪತ್ರಗಳ ಸಹಿತ ಹಾಜರಾಗಬೇಕು. ದೂರವಾಣಿ ಸಂಖ್ಯೆ: 0467-2203118.


