HEALTH TIPS

ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಗಣಪತಿ ಹವನಗಳ ಸಂಪನ್ನ

           ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ  ಶ್ರೀ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಶ್ರೀಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. 

          ಶ್ರೀ ಕ್ಷೇತ್ರದಲ್ಲಿ ಉಷಾಃಕಾಲ ಪೂಜೆಯು ಜರಗಿತು. ಬಳಿಕ ಕ್ಷೇತ್ರದ ಮೊಕ್ತೇಸರ ವೇದಮೂರ್ತಿ ಯನ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಬ್ರಹ್ಮಶ್ರೀ ಪರಮೇಶ್ವರ ಕಾರಂತರ ದಿವ್ಯ ಹಸ್ತದಿಂದ ಗಣಪತಿ ಹವನವನ್ನು ನಡೆಸಲಾಯಿತು. ಶಿವರಾಜ ವಿ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಪೀಠ ಪೂಜೆಯನ್ನು ಮಾಡಿ ಕ್ಷೀರಾಭಿಷೇಕ ಫಲಾಭಿಷೇಕ ನಾಳಿಕೇರ ಅಭಿಷೇಕ ಸುಗಂಧಾಭಿಷೇಕ ಪುಷ್ಪಾಭಿಷೇಕ ಜಲಾಭಿಷೇಕದೊಂದಿಗೆ ಪ್ರಸನ್ನಗೊಳಿಸಿ ಕಬ್ಬು ಮಂಟಪವನ್ನು ನಿರ್ಮಿಸಿ ಧೂರ್ವಾ ಪುಷ್ಪಗಳಿಂದ ಪೂಜೆ ಸಲ್ಲಿಸಿದರು. ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಹಾಗೂ ಪರಿವಾರ ಇನ್ನಿತರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಯಿತು. ಶ್ರೀದೇವರ ತೀರ್ಥ ಪ್ರಸಾದ ವಿತರಣೆ ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries