ಮಂಜೇಶ್ವರ: ಮದಂಗಲ್ಲುಕಟ್ಟೆ ಶ್ರೀ ಮಹಾಗಣಪತಿ ಭಜನಾ ಸಂಘದ ವತಿಯಿಂದ 40ನೇ ವರ್ಷದ ಶ್ರಿ ಗಣೇಶೋತ್ಸವವು ಇತ್ತೀಚೆಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರ್ಕಾರದ ಕರೊನಾ ಮಾರ್ಗಸೂಚಿಯಂತೆ ಸರಳವಾಗಿ ಒಂದೇ ದಿನ ನಡೆಸಲಾಯಿತು.
ವೇದಮೂರ್ತಿ ರಾಮಭಟ್ ಬೋಳಂತಕೋಡಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗಣಪತಿ ಪ್ರತಿಷ್ಠೆ, ಗಣಹೋಮ, ಸತ್ಯಗಣಪತಿ ಪೂಜೆ, ಭಜನಾ ಕಾರ್ಯಕ್ರಮಗಳು ಜರಗಿ ಸಂಜೆ ಗಣಪತಿ ವಿಸರ್ಜನೆ ಭಕ್ತಿ ಶ್ರದ್ಧೆಗಳಿಂದ ನಡೆಸಲಾಯಿತು.


