HEALTH TIPS

ಚಿನ್ನ ಕಳ್ಳಸಾಗಣೆ: ಪತ್ರಕರ್ತ ಅನಿಲ್ ನಂಬಿಯಾರ್ ರಿಗೆ ಕಸ್ಟಮ್ಸ್ ನೋಟಿಸ್

  

          ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಪತ್ರಕರ್ತ, ಜನಂ ಟಿ.ವಿ. ಸಂಯೋಜಕ ಸಂಪಾದಕ ಅನಿಲ್ ನಂಬಿಯಾರ್ ಅವರಿಗೆ ಕಸ್ಟಮ್ಸ್ ವಿಚಾರಣೆಗಾಗಿ ನೋಟಿಸ್ ಕಳುಹಿಸಿದೆ  ಎಂದು ವರದಿಯಾಗಿದೆ. ಅನಿಲ್ ನಂಬಿಯಾರ್ ಅವರಿಗೆ ಈ ವಾರ ಕೊಚ್ಚಿಯ ಎನ್.ಐ.ಎ. ಕೇಂದ್ರ ಕಚೇರಿಯಲ್ಲಿ ಹಾಜರಾಗಲು "ಮೌಖಿಕ ಸೂಚನೆ" ನೀಡಲಾಗಿದ್ದು, ಶೀಘ್ರದಲ್ಲೇ ಅವರನ್ನು ಕರೆಸಲಾಗುವುದು ಎಂದು ತಿಳಿದುಬಂದಿದೆ.

        ಲಭ್ಯ ಮಾಹಿತಿಯಂತೆ ರಾಜತಾಂತ್ರಿಕ ಸರಂಜಾಮುಗಳ ಮೂಲಕ ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಚಿನ್ನವನ್ನು ಪಡೆಯಲು ಜುಲೈ 5 ರಂದು ಸ್ವಪ್ನಾ ಸುರೇಶ್ ಮತ್ತು ಅನಿಲ್ ನಂಬಿಯಾರ್ ಅವರು ಹಲವು ಬಾರಿ ಸಂಪರ್ಕಿಸಲಾಗಿರುವುದಾಗಿ ಸಂಶಯಿಸಲಾಗಿದೆ. ವರದಿಯ ಪ್ರಕಾರ, ಅನಿಲ್ ನಂಬಿಯಾರ್ ಅವರು ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ದೂರವಾಣಿ ಮೂಲಕ ಹಲವಾರು ಬಾರಿ ಸಂಪರ್ಕಿಸಿದ್ದರು ಎನ್ನಲಾಗಿದೆ. 

   ಅನಿಲ್ ನಂಬಿಯಾರ್ ಅವರು ಈ ಹಿಂದೆ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಸ್ವಪ್ನಾ ಸುರೇಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದಾಗಿ ಒಪ್ಪಿಕೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries