ಕಾಸರಗೋಡು: ದೇಶದ ಅತ್ಯುತ್ತಮ ಕೇಂದ್ರೀಯ ವಿವಿಗಳ ಪೈಕಿ 14ನೇ ರಾಂಕ್ ಗಳಿಸಿದ ಕೇರಳ ಕೇಂದ್ರೀಯ ವಿವಿ (ಸಿ.ಯು.ಕೆ.) ನಾಡಿಗೆ ಹಿರಿಮೆ ತಂದಿದೆ.
ಅಕಾಡೆಮಿಕ್ ಅಧ್ಯಯನ, ಇಂಡಸ್ಟಿ ಇಂಟರ್ ಪೇಸ್, ಪ್ಲೇಸ್ ಮೆಂಟ್, ಭೌತಿಕ ಸೌಲಭ್ಯಗಳು, ಆಡಳಿತೆ ನಿರ್ವಹಣೆ, ವಿದ್ಯಾರ್ಥಿಗಳ ಪ್ರವೇಶಾತಿ, ವಿವಿಧತೆ, ಔಟ್ ರೀಚ್ ಸಹಿತ ವಿಚಾರಗಳ ತಳಹದಿಯಲ್ಲಿ ಔಟ್ ಲುಕ್ ಇಂಡಿಯಾ ಮ್ಯಾಗಝಿನ್ ನಡೆಸಿರುವ ವಾರ್ಷಿಕ ರಾಂಕಿಂಗ್ ನಲ್ಲಿ ಸಿ.ಯು.ಕೆ. 14ನೇ ರಾಂಕ್ ಪಡೆದಿದೆ. ದೇಶದ ಕೇಂದ್ರೀಯ ವಿವಿಗಳಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಆಯ್ಕೆಗಳ ಸಂಬಂಧ ಸಮೀಕ್ಷೆಯ ಅಂಗವಾಗಿ ರಾಂಕಿಂಗ್ ನಡೆಸಲಾಗುತ್ತದೆ. ಅಂತಿಮ ರಾಂಕ್ ಪಟ್ಟಿಯಲ್ಲಿ 25 ವಿವಿಗಳು ಇವೆ.





