ಕಾಸರಗೋಡು: ಬಳಾಲ್ ಕೋಟೆಕುನ್ನು ಪ್ರದೇಶದ ಬಂಡೆಕಲ್ಲು ಉರುಳುವಿಕೆ ನಡೆದು ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿರುವ ಕೇಂದ್ರೀಯ ವಿವಿ ಜಿಯಾಲಜಿ ತಂಡ ಅಧ್ಯಯನ ನಡೆಸಿದೆ.
ವಿಭಾಗ ಮುಖ್ಯಸ್ಥ ಡಾ.ಪ್ರತೀಷ್, ಡಾ.ಸಂದೀಪ್ ಅವರ ನೇತೃತ್ವದ ಪರಿಣತರ ತಂಡ ಇಲ್ಲಿಗೆ ಭೇಟಿ ನೀಡಿದೆ. ಕಳೆದ 4 ದಿನಗಳಿಂದ ಸುರಿದ ಬಿರುಸಿನ ಮಳೆಯ ಪರಿಣಾಮ ಗುಡ್ಡದ ಮಣ್ಣು ಸಡಿಲಗೊಂಡು ಇಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ಅವಲೋಕನ ವರದಿಯಲ್ಲಿ ಈ ತಂಡ ತಿಳಿಸಿದೆ. 2018ರ ನಂತರ ರಾಜ್ಯದಲ್ಲಿ ನಡೆದಿರುವ ಭೌಗೋಳಿಕ-ಹವಾಮಾನ ಬದಲಾವಣೆಗಳ ಬಗ್ಗೆ ಕೇಂದ್ರೀಯ ವಿವಿಯ ಜಿಯಾಲಜಿ ವಿಭಾಗ ಸಮಗ್ರ ಅಧ್ಯಯನ ಆರಂಭಿಸಿದ್ದು, ಇದರ ಅಂಗವಾಗಿ ಇಲ್ಲೂ ಶೋಧನೆ ನಡೆಸಲಾಗಿದೆ. ಮಲೇಷ್ಯಾದ ಕರ್ಟಿನ್ ವಿವಿಯೊಂದಿಗೆ ಸೇರಿ ಪಶ್ಚಿಮ ಘಟ್ಟದಲ್ಲಿ ಸಂಭವಿಸುವ ಬಂಡೆ ಕಲ್ಲು ಉರುಳುವಿಕೆ, ಭೂಕಂಪ ಸಾಧ್ಯತೆ ಇತ್ಯಾದಿಗಳ ಕುರಿತು ವಿಭಾಗೀಯ ಅಧ್ಯಯನಗಳು ನಡೆದುಬರುತ್ತಿವೆ. ಇಂದಿನ ಸ್ಥಿತಿಗತಿಗಳಿಗೆ ಅನುಸಾರ ಕಾಸರಗೋಡು ಜಿಲ್ಲೆಯಲ್ಲೂ ಇನ್ನಷ್ಟು ಅಧ್ಯಯನ ನಡೆಸುವ ಯೋಜನೆ ವಿವಿಗಿದೆ. ಜಿಲ್ಲೆಗಾಗಿ ಮಾತ್ರ ಭೂಗರ್ಣಭ ಜಲ ಉಪಯೋಗ ವ್ಯವಸ್ಥೆಯ ಕರಡು ಯೋಜನೆಯ ಸಿದ್ಧತೆಯನ್ನು ವಿಭಾಗ ಆರಂಭಿಸಿದೆ. ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರುಲು ಅವರ ನೇತೃತ್ವದಲ್ಲಿ ವಿವಿ ಜಾರಿಗೊಳಿಸುವ ಸಮಗ್ರ ಸಾಮಾಜಿಕ ಬದ್ಧತೆ ಕಾರ್ಯಕ್ರಮಗಳಲ್ಲಿ ಅಳವಡಿಸಿ ಮುಂದಿನ ಅಧ್ಯಯನ ನಡೆಸಲು ತಂಡ ಸಿದ್ಧತೆ ನಡೆಸಿದೆ.




