ಕಾಸರಗೋಡು: ಇತ್ತೀಚೆಗೆ ಬ್ರಹ್ಮೈಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನಾ ಉತ್ಸವ ಇಂದು(ಮಂಗಳವಾರ)ಹಾಗೂ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಆರಾಧನಾ ಉತ್ಸವ ಆರಂಭಗೊಳ್ಳಲಿದೆ. ದ್ವಾದಶ ಆರಾಧನೆ ಸಹಿತ ಶ್ರೀಗಳ ಆರಾಧನೆ ನೆರವೇರಲಿದೆ. ಅಪರಾಹ್ನ ಶ್ರೀಗಳ ಸ್ಮರಣಾರ್ಥ ವಿವಿಧ ಕಲಾವಿದರಿಂದ ಯಕ್ಷ ಗಾಯನ ಕಾರ್ಯಕ್ರಮ ನಡೆಯಲಿದೆ.
ನಾಳೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಅಪರಾಹ್ನ ಶ್ರೀಗಳ ಸ್ಮರಣಾರ್ಥ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಮಾನದಂಡಗಳಿಗೆ ಅನುಸಾರ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠಧ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





