ಬದಿಯಡ್ಕ: ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ದುರವಸ್ಥೆ ವಿರುದ್ಧ ಯುಡಿಎಫ್ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ನೇತೃತ್ವದಲ್ಲಿ ಪ್ರತಿಭಟನೆ ಸೋಮವಾರ ಕಾಲೇಜು ಪರಿಸರದಲ್ಲಿ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಮಾತನಾಡಿ ಉಕ್ಕಿನಡ್ಕ ವೈದ್ಯಕೀಯ ಕಾಲೇಜನ್ನು ಸರ್ಕಾರ ಈಗ ಆಸ್ಪತ್ರೆಯಾಗಿ ಬಳಸುತ್ತಿದೆ. ಆದರೆ ಸುವ್ಯವಸ್ಥಿತ ಐಸಿಯು ಉಪಯೋಗವಾಗಿಲ್ಲ ಮತ್ತು ವೆಂಟಿಲೇಟರ್ ಉಪಯೋಗ ಶೂನ್ಯವಾಗಿದೆ. ತಾತ್ಕಾಲಿಕ ನೌಕರರನ್ನು ಹೊರದಬ್ಬಲಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ, ಜನರನ್ನು ಸೌಕರ್ಯಗಳಿಂದ ವಂಚಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಯುಡಿಎಫ್ ಅಧ್ಯಕ್ಷ ಅಬ್ದುಲ್ಲ ಕುಂಞÂ್ಞ ಚೆರ್ಕಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್, ಕಾಸರಗೋಡು ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಮುಸ್ಲಿಂ ಲೀಗ್ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಕೋಶಾಧಿಕಾರಿ ಮಾಹಿನ್ ಕೇಳೋಟ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ , ಬಿ.ಎಸ್. ಗಾಂಭೀರ್, ಬದ್ರುದ್ದೀನ್ ಮಾಸ್ತರ್ ಮಾತನಾಡಿದರು. ಪಿ.ಜಿ. ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಖಾದರ್ ಮಾನ್ಯ, ಮ್ಯಾಥ್ಯೂಸ್, ನಾಸರ್, ಅಬ್ದುಲ್ಲಾ ಚಳ್ಳಕ್ಕೆರೆ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಎನ್. ನಾರಾಯಣ ಮಣಿಯಾಣಿ ಸ್ವಾಗತಿಸಿ, ಅನ್ವರ್ ಓಜೋನ್ ವಂದಿಸಿದರು.






