ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 191 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 176 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ 8 ಮಂದಿ ಹಾಗು ವಿದೇಶದಿಂದ ಬಂದ 7 ಮಂದಿಗೆ ರೋಗ ಬಾಧಿಸಿದೆ. 203 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 8196 ಮಂದಿಗೆ ಸೋಂಕು ಬಾಧಿಸಿದ್ದು, 6119 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಜಿಲ್ಲೆಯ 2011 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಇಬ್ಬರು ಮರಣಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ.
ರೋಗ ಬಾಧಿತರು-ಪಂಚಾಯತಿವಾರು : ಕಯ್ಯೂರು ಚೀಮೇನಿ-2, ಅಜಾನೂರು-5, ತೃಕ್ಕರಿಪುರ-10, ನೀಲೇಶ್ವರ-1, ಪಡನ್ನ-13, ಮಂಗಲ್ಪಾಡಿ-11, ಚೆರ್ವತ್ತೂರು-1, ಚೆಮ್ನಾಡ್-3, ಉದುಮ-7, ಕುತ್ತಿಕ್ಕೋಲ್-5, ಕಳ್ಳಾರ್-9, ಕುಂಬಳೆ-7, ಪುತ್ತಿಗೆ-2, ಮಧೂರು-7, ಎಣ್ಮಕಜೆ-4, ಕಾಂಞಂಗಾಡ್-14, ಮಡಿಕೈ-1, ಪೈವಳಿಕೆ-3, ಮೀಂಜ-1, ಕಾಸರಗೋಡು-16, ಚೆಂಗಳ-14, ಮೊಗ್ರಾಲ್ ಪುತ್ತೂರು-1, ಮುಳಿಯಾರು-2, ಪಳ್ಳಿಕೆರೆ-16, ಬದಿಯಡ್ಕ-4, ಮಂಜೇಶ್ವರ-7, ಬೇಡಡ್ಕ-12, ಪುಲ್ಲೂರು-8, ಪಿಲಿಕ್ಕೋಡು-3, ಕಿನಾನೂರು-1, ಬಳಾಲ್-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 4644 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಶನಿವಾರ 4644 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 18 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದರು. 3781 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 86 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 37,488 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2862 ಮಂದಿ ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರೋಗ ಬಾಧಿತರು : ತಿರುವನಂತಪುರ-824, ಮಲಪ್ಪುರಂ-534, ಕೊಲ್ಲಂ-436, ಕಲ್ಲಿಕೋಟೆ-412, ತೃಶ್ಶೂರು-351, ಎರ್ನಾಕುಳಂ-351, ಪಾಲ್ಘಾಟ್-349, ಆಲಪ್ಪುಳ-348, ಕೋಟ್ಟಯಂ-263, ಕಣ್ಣೂರು-222, ಪತ್ತನಂತಿಟ್ಟ-221, ಕಾಸರಗೋಡು-191, ವಯನಾಡು-95, ಇಡುಕ್ಕಿ-47 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತ : ತಿರುವನಂತಪುರ-564, ಕೊಲ್ಲಂ-243, ಪತ್ತನಂತಿಟ್ಟ-154, ಆಲಪ್ಪುಳ-224, ಕೋಟ್ಟಯಂ-119, ಇಡುಕ್ಕಿ-54, ಎರ್ನಾಕುಳಂ-189, ತೃಶ್ಶೂರು-191, ಪಾಲ್ಘಾಟ್-130, ಮಲಪ್ಪುರಂ-326, ಕಲ್ಲಿಕೋಟೆ-344, ವಯನಾಡು-31, ಕಣ್ಣೂರು-91, ಕಾಸರಗೋಡು-202 ಎಂಬಂತೆ ಗುಣಮುಖರಾಗಿದ್ದಾರೆ.





