HEALTH TIPS

ಮಳೆಯೊಂದಿಗೆ ಏರುಗತಿಯ ಕೋವಿಡ್ ಹರಡುವಿಕೆ-ಕೇರಳದಲ್ಲಿ ಇಂದು 4644 ಮಂದಿಗೆ ಕೋವಿಡ್-ಸಂಪರ್ಕದ ಮೂಲಕ 3781 ಜನರಿಗೆ ಸೋಂಕು

  

           ತಿರುವನಂತಪುರ: ಒಂದೆಡೆ ರಾಜ್ಯಾದ್ಯಂತ ಮಳೆ ತೀವ್ರಗತಿಯಲ್ಲಿದ್ದರೆ ಮತ್ತೊಂದೆಡೆ ಕೋವಿಡ್ ಕೊರೊನಾ ತೀವ್ರ ಪ್ರಕೋಪಾವಸ್ಥೆಗೆ ಸಾಗಿ ಕಳವಳಕ್ಕೆ ಕಾರಣವಾಗುತ್ತಿದೆ. ಕೇರಳದಲ್ಲಿ ಇಂದು 4644 ಜನರಿಗೆ ಕೋವಿಡ್ -19 ಖಚಿತವಾಗಿದೆ. 2862 ಜನರನ್ನು ಗುಣಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇಂದು, ಕೋವಿಡ್‍ನಿಂದ 18 ಸಾವುಗಳು ದೃಢಪಟ್ಟಿದೆ. ತಿರುವನಂತಪುರದಲ್ಲಿ ಇಂದು 824 ಪ್ರಕರಣಗಳನ್ನು ದೃಢಪಡಿಸಲಾಗಿದೆ. 

     ಕೋವಿಡ್ ಪಾಸಿಟಿವ್ ಜಿಲ್ಲಾವಾರು ವಿವರ:  

     ತಿರುವನಂತಪುರ 824, ಮಲಪ್ಪುರಂ 534, ಕೊಲ್ಲಂ 436, ಕೋಝಿಕ್ಕೋಡ್ 412, ತ್ರಿಶೂರ್ ಮತ್ತು ಎರ್ನಾಕುಲಂ ತಲಾ 351, ಪಾಲಕ್ಕಾಡ್ 349, ಆಲಪ್ಪುಳ 348, ಕೊಟ್ಟಾಯಂ 263, ಕಣ್ಣೂರು 222, ಪತ್ತನಂತಿಟ್ಟು 221, ಕಾಸರಗೋಡು 191, ವಯನಾಡ್ 95, ಇಡುಕ್ಕಿ 47 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಆಗಿದೆ.

         ರಾಜ್ಯದಲ್ಲಿ 18 ಕೋವಿಡ್ ಸಾವುಗಳು:

   ಇಂದು, ಕೋವಿಡ್ -19 ಕಾರಣದಿಂದಾಗಿ 18 ಸಾವುಗಳನ್ನು ದೃಢಪಡಿಸಲಾಗಿದೆ. ಮೃತರನ್ನು ಪಾಲಕ್ಕಾಡ್ ನ  ಒಟ್ಟಪ್ಪಾಲಂನ ಕಾತ್ರ್ಯಾಯಿನಿ (67), ಕೊಲ್ಲಂನ ಪರಮೇಶ್ವರನ್ (77), ತಿರುವನಂತಪುರ ಚೆಂಪಜಾಂತಿಯ ಶಾಜಿ (47), ಎರ್ನಾಕುಳಂ  ಕಡವಂತ್ರದ ರಾಧಾಕೃಷ್ಣನ್ (62), ತೃಶೂರ್ ರಾಮವರ್ಮುರ್ ನಿವಾಸಿ ಕೆ.ಎಂ.ಹರೀಶ್ ಕುಮಾರ್(29), ತ್ರಿಶೂರ್ ನ ಚಿನ್ನ(74), ತಿರುವನಂತಪುರ ಮುಝಿ ಯ ತಂಗಪ್ಪನ್ ಪಿಳ್ಳೆ(87), ಪಾಲಕ್ಕಾಡ್ ಸುಹರಾ (75), ಕೊಲ್ಲಂ ಚವರದ ಸದಾನಂದನ್ (89)  ಕೊಲ್ಲಂನ ಪ್ರಕುಲಂನ ವಸಂತಯಮ್ಮ (78), ತಿರುವನಂತಪುರ ಕಾಂಜಿರಂಪಾರಾದ ಸೀತಾ (94),  ತಿರುವನಂತಪುರ ವಳ್ಳಿಚ್ಚಿರದ ಸೋಮನ್ (65), ತೃಶೂರ್ ನ ಲೀಲಾವತಿ (81), ತ್ರಿಶೂರ್ ನಲ್ಲಂಕರಾದ ಅಮ್ಮಿನಿಯಮ್ಮ (89), ನಾಗರಕೋಯಿಲಂ ನ ರವಿಚಂದ್ರನ್ (59), ಎರ್ನಾಕುಳಂ ನ ವಿ.ಎಲ್. ಜಾನ್ (66), ಕಾಸರಗೋಡಿನ ಚಂದ್ರನ್ (60) ಹಾಗೂ ಕಾಸರಗೋಡಿನ ಇನ್ನೋರ್ವೆ ನಾರಾಯಣಿ (90) ಎಂಬವರ ಮರಣ ಕೋವಿಡ್ ಸೋಂಕು ಬಾಧೆಯಿಂದ ಎಂದು ಸರ್ಕಾರ ದೃಢಪಡಿಸಿದೆ.

          ಸಂಪರ್ಕ ಸೋಂಕುಗಳ  ವಿವರಗಳು: 

    ಇಂದು 3781 ಜನರಿಗೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. 498 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರಂ 783, ಮಲಪ್ಪುರಂ 517, ಕೊಲ್ಲಂ ಮತ್ತು ಕೋಝಿಕ್ಕೋಡ್ ತಲಾ 389, ತ್ರಿಶೂರ್ 342, ಪಾಲಕ್ಕಾಡ್ 330, ಎರ್ನಾಕುಳಂ 320, ಆಲಪ್ಪುಳ 284, ಕೊಟ್ಟಾಯಂ 260, ಕಣ್ಣೂರು 199, ಪತ್ತನಂತಿಟ್ಟು  176, ಕಾಸರಗೋಡು 172, ವಯನಾಡ್ 87, ಇಡುಕ್ಕಿ 31 ಮಂದಿಗಳಿಗೆ ಇಂದು ಸಂಪರ್ಕದ ಮೂಲಕ ಸೋಂಕು ತಗಲಿರುವುದು ದೃಢಪಟ್ಟಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 36 ಮಂದಿ ವಿದೇಶಗಳಿಂದ ಮತ್ತು 229 ಇತರ ರಾಜ್ಯಗಳಿಂದ ಬಂದವರು.

          86 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್:

      86 ಆರೋಗ್ಯ ಕಾರ್ಯಕರ್ತರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು.  ತಿರುವನಂತಪುರಂ 36, ಕಣ್ಣೂರು 12, ಕೊಲ್ಲಂ 6, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್ ತಲಾ 5, ಕಾಸರಗೋಡು 4, ಪತ್ತನಂತಿಟ್ಟು,  ಆಲಪ್ಪುಳ, ಪಾಲಕ್ಕಾಡ್ ಮತ್ತು ವಯನಾಡ್ ತಲಾ 2  ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ.  ಎರ್ನಾಕುಳಂ ಜಿಲ್ಲೆಯ ಎಲ್ಲಾ 14 ಐಎನ್‍ಹೆಚ್ ಎಸ್ ನೌಕರರು ಸೋಂಕಿಗೊಳಗಾಗಿದ್ದಾರೆ. 

             ನೆಗೆಟಿವ್ ಪ್ರಕರಣಗಳ ವಿವರಗಳು:

    ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2862 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 564, ಕೊಲ್ಲಂ 243, ಪತ್ತನಂತಿಟ್ಟು 154, ಆಲಪ್ಪುಳ 224, ಕೊಟ್ಟಾಯಂ 119, ಇಡುಕ್ಕಿ 54, ಎರ್ನಾಕುಳಂ 189, ತ್ರಿಶೂರ್ 191, ಪಾಲಕ್ಕಾಡ್ 130, ಮಲಪ್ಪುರಂ 326, ಕೋಝಿಕ್ಕೋಡ್ 344, ವಯನಾಡ್ 31, ಕಣ್ಣೂರು 91 ಇಂದು ನೆಗೆಟಿವ್ ಆಗಿದೆ.  ಇದರೊಂದಿಗೆ 37,488 ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 92,951 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

          ದೇಶದಲ್ಲಿ 30 ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ

     ಕೇಂದ್ರ ಆರೋಗ್ಯ ಸಚಿವಾಲಯದ ವಿವರಣೆಯಂತೆ ದೇಶದಲ್ಲಿ 30 ಕೋವಿಡ್ ಲಸಿಕೆಗಳು ಸಂಶೋಧನೆಯಲ್ಲಿವೆ ಮತ್ತು ಅವುಗಳಲ್ಲಿ ಮೂರು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿವೆ. ಐಸಿಎಂಆರ್ - ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತೀಯ ಲಸಿಕೆ ತಯಾರಕ ಭಾರತ್ ಬಯೋಟೆಕ್ ಈ ಸಂಶೋಧನೆಯ ನೇತೃತ್ವ ವಹಿಸಿದೆ. ಭಾರತದಲ್ಲಿ ಎರಡು ವಿದೇಶಿ ಲಸಿಕೆಗಳನ್ನು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಐಸಿಎಂಆರ್ ಪರೀಕ್ಷಿಸುತ್ತಿದೆ ಎಂದು ಕೇಂದ್ರ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿತು.

         ದೇಶದಲ್ಲಿ 53 ಲಕ್ಷ ಕೋವಿಡ್ ಪ್ರಕರಣಗಳಿವೆ

    ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 93,337 ಪ್ರಕರಣಗಳನ್ನು ದೃಢಪಡಿಸಲಾಗಿದೆ. ಇದರೊಂದಿಗೆ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 53,08,015 ಕ್ಕೆ ಏರಿದೆ. ವಿವಿಧ ಆಸ್ಪತ್ರೆಗಳಲ್ಲಿ 10,13,964 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಕೋವಿಡ್‍ನಿಂದಾಗಿ 1247 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ ದೇಶದಲ್ಲಿ 85,619 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries