ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ, ಅಧ್ಯಾಪಕರಾಗಿ, ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿರುವ ದಿ.ಯಂ ರಾಮಕೃಷ್ಣ ರಾವ್ ಅವರ 15ನೇ ಪುಣ್ಯ ತಿಥಿಯ ಸಂದರ್ಭ ಸೆ.25 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ವಹಿಸುವರು. ಮುಖ್ಯ ಅತಿಥಿಯಾಗಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ನಾರಾಯಣ ಭಟ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಯೋಗೀಶ್ ರಾವ್ ಟಿ.ಡಿ ಹಾಗೂ ಕೃಷ್ಣ.ಜಿ ಮಂಜೇಶ್ವರ ಇವರನ್ನು ಸನ್ಮಾನಿಸಲಾಗುವುದು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ ಉಪಸ್ಥಿತರಿರುವರು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.




