ಮುಳ್ಳೇರಿಯ: ಮಲೆನಾಡ ಗುಡ್ಡ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಾನಿಗಳುಂಟಾಗಿದೆ.
ಕಳ್ಳಾರ್ ಗ್ರಾಮ ಪಂಚಾಯತಿಯ ಒಟ್ಟಕಂಡಂನಲ್ಲಿ ದೊಡ್ಡ ಬಂಡೆಕಲ್ಲು ಕುಸಿಯುವ ಹಂತದಲ್ಲಿದ್ದು ಈ ಪ್ರದೇಶದ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಭಾರಿ ಮಳೆಯಿಂದಾಗಿ ಬೆಳ್ಳೂರು ಗ್ರಾಮ ಪಂಚಾಯತಿಯ ಮೊಟ್ಟೆಕುಂಜ ಎಂಬಲ್ಲಿ ಎ.ವಿ.ನಾರಾಯಣ ಎಂಬವರ ಬಾವಿ ಸಂಪೂರ್ಣ ಕುಸಿದಿದೆ. ಸುಮಾರು 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಚಿತ್ತಾರಿಕಲ್ ಗ್ರಾಮದ ಈಸ್ಟ್ ಎಳೇರಿಯ ಪತಿಯಾತ್ ಶಾಜು ಅವರ ಮನೆಯಗೆ ಮರವೊಂದು ಬಿದ್ದು ಭಾಗಶಃ ಹಾನಿಯಾಗಿದೆ. 50,000 ರೂ. ನಷ್ಟ ಅಂದಾಜಿಸಲಾಗಿದೆ.





