ಕಾಸರಗೋಡು: ಶ್ರೀಮದ್ ಎಡನೀರು ಮಠದ ಉತ್ತರಾಧಿಕಾರಿಗಳಾಗಿ ಪೀಠಾರೋಹಣಗೈಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳು ಅವರು ಪೂರ್ವಭಾವಿಯಾಗಿ ಪುಣ್ಯಕ್ಷೇತ್ರಗಳ ಪಯಣವನ್ನು ಸೋಮವಾರ ಆರಂಭಿಸಿದರು.
ಬೆಳಿಗ್ಗೆ ಅಡೂರು ಶ್ರೀಮಹಾಲಿಂಗೇಶ್ವರ ದೇವಾಲಯ ದರ್ಶನಗೈದರು. ಬಳಿಕ ಕುಂಟಾರು ಶ್ರೀಮಹಾವಿಷ್ಣು ದೇವಾಲಯ, ಮಧೂರು ಶ್ರೀಮಹಾಗಣಪತಿ ದೇವಾಲಯ, ಮುಜುಂಗಾವು ಶ್ರೀಪಾಥಸಾರಥಿ ಶ್ರೀಕೃಷ್ಣ ದೇವಾಲಯ, ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯ, ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ, ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಾಲಯಗಳ ದರ್ಶನಗೈದರು. ಬಳಿಕ ಕುಂಬಳೆ ಸೀಮೆಯ ಹೃದಯಸ್ಥಾನವಾದ ಮಾಯಿಪ್ಪಾಡಿ ಅರಮನೆಗೆ ಭೇಟಿ ನೀಡಿ, ಶ್ರೀರಾಜರಾಜೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.





