HEALTH TIPS

ರಾಜ್ಯದಲ್ಲಿ ಮತ್ತೆ 3026 ಕ್ಕೇರಿದ ಕರೊನಾ ಸೋಂಕು ಪ್ರಕರಣ-ಕಾಸರಗೋಡು : 166 ಮಂದಿಗೆ ಸೋಂಕು ದೃಢ

 

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 166 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. 163 ಮಂದಿ ಸಂಪರ್ಕದಿಂದ ರೋಗ ಬಾಧಿತರಾಗಿದ್ದಾರೆ. ಇತರ ರಾಜ್ಯಗಳಿಂದ ಬಂದ ಇಬ್ಬರಿಗೆ ಹಾಗೂ ವಿದೇಶದಿಂದ ಬಂದ ಒಬ್ಬರಿಗೆ ರೋಗ ಬಾಧಿಸಿದೆ. ಇದೇ ವೇಳೆ 92 ಮಂದಿ ಗುಣಮುಖರಾಗಿದ್ದಾರೆ.

         ಚೆಮ್ನಾಡ್-17, ಉದುಮ-6, ಈಸ್ಟ್ ಎಳೇರಿ-2, ಅಜಾನೂರು-14, ಪಿಲಿಕೋಡ್-23, ಚೆಂಗಳ-22, ಮೊಗ್ರಾಲ್‍ಪುತ್ತೂರು-1, ನೀಲೇಶ್ವರ-4, ಕುಂಬಳೆ-4, ಕಾಂಞಂಗಾಡ್-12, ಎಣ್ಮಕಜೆ-3, ಮಧೂರು-3, ಬದಿಯಡ್ಕ-3, ತೃಕ್ಕರಿಪುರ-6, ಮಡಿಕೈ-2, ಕಾಸರಗೋಡು-4, ಮಂಜೇಶ್ವರ-8, ಪಡನ್ನ-3, ಕಿನಾನೂರು-1, ಕೋಡೋಂ ಬೇಳೂರು-5, ಪುಲ್ಲೂರು-10, ಪಳ್ಳಿಕೆರೆ-1, ಪುತ್ತಿಗೆ-7, ಪೈವಳಿಕೆ-3, ಕಳ್ಳಾರ್-1, ಕಾರಡ್ಕ-1 ಎಂಬಂತೆ ರೋಗ ಬಾಧಿಸಿದೆ. 


  ಕೇರಳದಲ್ಲಿ 3026 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 3026 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ರೋಗ ಬಾಧಿತರಲ್ಲಿ 49 ಮಂದಿ ವಿದೇಶದಿಂದ ಮತ್ತು 163 ಮಂದಿ ಇತರ ರಾಜ್ಯಗಳಿಂದ ಬಂದವರು. 2723 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 89 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಇಬ್ಬರು ಸಿಐಎಸ್‍ಎಫ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 1862 ಮಂದಿ ಗುಣಮುಖರಾಗಿದ್ದಾರೆ.

      ರೋಗ ಬಾಧಿತರು : ತಿರುವನಂತಪುರ-562, ಮಲಪ್ಪುರಂ-358, ಎರ್ನಾಕುಳಂ-318, ಕಲ್ಲಿಕೋಟೆ-246, ಪಾಲ್ಘಾಟ್-226, ಆಲಪ್ಪುಳ-217, ಕೊಲ್ಲಂ-209, ಕೋಟ್ಟಯಂ-168, ಕಾಸರಗೋಡು-166, ಪತ್ತನಂತಿಟ್ಟ-160, ಕಣ್ಣೂರು-158, ತೃಶ್ಶೂರು-129, ಇಡುಕ್ಕಿ-85, ವಯನಾಡು-24 ಎಂಬಂತೆ ರೋಗ ಬಾಧಿಸಿದೆ. 13 ಮಂದಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದಾಗಿ ದೃಢೀಕರಿಸಲಾಗಿದೆ. 

        ಗುಣಮುಖ : ತಿರುವನಂತಪುರ-389, ಕೊಲ್ಲಂ-191, ಪತ್ತನಂತಿಟ್ಟ-90, ಆಲಪ್ಪುಳ-147, ಕೋಟ್ಟಯಂ-133, ಇಡುಕ್ಕಿ12, ಎರ್ನಾಕುಳಂ-204, ತೃಶ್ಶೂರು-110, ಪಾಲ್ಘಾಟ್-59,ಮಲಪ್ಪುರಂ159, ಕಲ್ಲಿಕೋಟೆ-145, ವಯನಾಡು-25, ಕಣ್ಣೂರು-106, ಕಾಸರಗೋಡು-92 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 23,217 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ 68,863 ಮಂದಿ ಗುಣಮುಖರಾಗಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries