HEALTH TIPS

ಕರ್ನಾಟಕ ಜಾನಪದ ವಿವಿ ನೇಮಕಾತಿ; ಸೆ.30ರ ತನಕ ಅರ್ಜಿ ಹಾಕಿ

            ಬೆಂಗಳೂರು : ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಬೋಧಕರು ಮತ್ತು ಇತರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 30/9/2020 ಕೊನೆಯ ದಿನವಾಗಿದೆ. ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಿರುವ ಸ್ನಾತಕೋತ್ತರ ಎಂಎ, ಎಂಪಿಎ, ಎಂಎಸ್‌ಡಬ್ಲ್ಯೂ ಹಾಗೂ ಎಂಬಿಎ ತರಗತಿಗೆ ಬೋಧಕರ ಅಗತ್ಯವಿದೆ.

           ಜಾನಪದ ವಿಶ್ವವಿದ್ಯಾಲಯದ ಬೋಧನೆ, ವಿಸ್ತರಣೆ, ಸಲಹಾ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರಗಳು, ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ಹುದ್ದೆ ಭರ್ತಿ ಮಾಡಲಾಗುತ್ತಿದೆ.
         ಅಗತ್ಯ ವಿದ್ಯಾರ್ಹತೆ ಮತ್ತು ಸೇವಾ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಸ್ವ ವಿವರ ಮತ್ತು ಪೂರಕ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆ ದಿನ.
        ಸಹಾಯಕ ಪ್ರಾಧ್ಯಾಪಕರು 28 ಹುದ್ದೆ: ಜಾನಪದ ವಿಶ್ವವಿದ್ಯಾಲಯದಲ್ಲಿ 28 ಸಹಾಯಕ ಪ್ರಧ್ಯಾಪಕರ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಜಾನಪದ ವಿಜ್ಞಾನ 2, ಜಾನಪದ ಸಾಹಿತ್ಯ 2, ಜನಪದ ಕಲೆ 2, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ 2, ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 2, ಕನ್ನಡ ಮತ್ತು ಜಾನಪದ 2, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ 2, ದೃಶ್ಯ ಕಲೆ 2, ಅರ್ಥಶಾಸ್ತ್ರ 2, ಸಮಾಜಶಾಸ್ತ್ರ 2, ಇಂಗ್ಲಿಶ್ 2, ಸಮಾಜ ಕಾರ್ಯ 2, ಪ್ರದರ್ಶನ ಕಲೆ 2 ಹುದ್ದೆಗಳಿವೆ.
      ವಿವಿಧ ಹುದ್ದೆಗಳ ಭರ್ತಿ: ತಾತ್ಕಾಲಿಕ ಯೋಜನಾ ಸಹಾಯಕರು 8, ವಿಸ್ತರಣೆ ಹಾಗೂ ಸಲಹಾ ಕೇಂದ್ರ 2, ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ತಾತ್ಕಾಲಿಕ ಗ್ರಂಥಪಾಲಕರು 1 ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
                  ಅರ್ಜಿಗಳನ್ನು ಸಲ್ಲಿಸಿ :
   ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 ರೂ. ಮತ್ತು ಇತರೆ ವರ್ಗದ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಶಿಗ್ಗಾವಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಪಾವತಿಯಾಗುವಂತೆ ಡಿಡಿಯನ್ನು ಹಣಕಾಸು ಅಧಿಕಾರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಪಡೆದು ಅರ್ಜಿ ಜೊತೆ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗೆ ವಿವಿ ವೆಬ್‌ ಸೈಟ್‌ಗೆ ಭೇಟಿ ನೀಡಬಹುದು.
       ಅರ್ಜಿ ಸಲ್ಲಿಸಲು ವಿಳಾಸ ಅರ್ಜಿಗಳನ್ನು ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಗಗೋಡಿ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2255180.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries