ಬೆಂಗಳೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಮ್ಯಾಕ್ಸ್ ಲೈಫ್/ಕಂಪನಿ) ಕೋವಿಡ್-19 ಆವೃತ್ತಿಯ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ಕಂತಾರ್ ಸಹಯೋಗದಲ್ಲಿ ''ಮ್ಯಾಕ್ಸ್ ಲೈಫ್ ಇಂಡಿಯಾ ಪ್ರೊಟೆಕ್ಷನ್ ಕೋಶಂಟ್ ಎಕ್ಸ್ ಪ್ರೆಸ್'' (ಐಪಿಕ್ಯು/ಐಪಿಕ್ಯು ಎಕ್ಸ್ ಪ್ರೆಸ್) ಎಂಬ ಸಮೀಕ್ಷೆಯನ್ನು ನಡೆಸಿದೆ.ಐಪಿಕ್ಯು ಎಕ್ಸ್ ಪ್ರೆಸ್ ಎಂಬ ಹೆಸರಿನ ಈ ಸಮೀಕ್ಷೆಯು ಕೋವಿಡ್-19 ರ ಸಂದರ್ಭದಲ್ಲಿ ಪ್ರಬಲವಾದ ಗ್ರಾಹಕರ ಮನೋಭಾವವನ್ನು ಹೊರಹಾಕಿದೆ. ಆರ್ಥಿಕ ಭದ್ರತೆ, ಉಳಿತಾಯ, ಹೂಡಿಕೆಗಳು, ವೈದ್ಯಕೀಯ ಸಿದ್ಧತೆ ಮತ್ತು ಪ್ರಮುಖವಾಗಿ ಆತಂಕಗಳು ಹಾಗೂ ಹೊಸ ಹೊಸ ಸ್ವೀಕಾರ ಮಟ್ಟಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಬುದ್ಧಿವಂತಿಕೆಯನ್ನು ಹೊಂದಿರುವ ನಗರ ಪ್ರದೇಶದ ಭಾರತೀಯರು ಹೇಗೆ ಸುರಕ್ಷಿತವಾಗಿದ್ದಾರೆ ಎಂಬುದನ್ನು ಈ ಸಮೀಕ್ಷೆ ತಿಳಿಸುತ್ತದೆ.
ಡಿಜಿಟಲ್ ಸ್ನೇಹಿ ದಕ್ಷಿಣ ಭಾರತದ ನಗರ ಪ್ರದೇಶದಲ್ಲಿ ಪ್ರತಿಕ್ರಿಯೆ ನೀಡಿರುವವಲ್ಲಿ ಕೋವಿಡ್-19 ಕಾಲದಲ್ಲಿ ಶೇ.46 ರಷ್ಟು ಮಂದಿ ರಕ್ಷಣೆಯನ್ನು ಹೊಂದಿದ್ದಾರೆ ಮತ್ತು ಇದರ ರಾಷ್ಟ್ರೀಯ ಸರಾಸರಿ ಶೇ.45 ರಷ್ಟಾಗಿದೆ. ದಕ್ಷಿಣ ಭಾರತದಲ್ಲಿ ಶೇ.78 ರಷ್ಟು ಲೈಫ್ ಇನ್ಶೂರೆನ್ಸ್ ಮಾಲೀಕತ್ವ ಹೊಂದಿದ್ದರೆ, ನಂತರದಲ್ಲಿ ಪೂರ್ವ ಭಾಗದಲ್ಲಿ ಶೇ.77 ಮತ್ತು ಪಶ್ಚಿಮದಲ್ಲಿ ಶೇ.73 ರಷ್ಟು ಲೈಫ್ ಇನ್ಶೂರೆನ್ಸ್ ಮಾಲೀಕತ್ವ ಹೊಂದಲಾಗಿದೆ. ಅದೇ ರೀತಿ ದಕ್ಷಿಣ ಭಾರತದ ಲೈಫ್ ಇನ್ಶೂರೆನ್ಸ್ ಜ್ಞಾನ ಸೂಚ್ಯಂಕವು ಅತ್ಯಧಿಕ ಶೇ.68 ರಷ್ಟಾಗಿದ್ದು, ಇದರ ನಂತರ ಪೂರ್ವ ಶೇ.67, ಉತ್ತರ ಶೇ.66 ಮತ್ತು ಪಶ್ಚಿಮ ಭಾಗದಲ್ಲಿ ಶೇ.63 ರಷ್ಟಿದೆ.ಸಮೀಕ್ಷೆಯ ಪ್ರಮುಖ ಅಂಶಗಳು * ಕೋವಿಡ್-19 ಹಿನ್ನೆಲೆಯಲ್ಲಿ ಶೇ.86 ರಷ್ಟು ಡಿಜಿಟಲ್ ಸ್ನೇಹಿ ದಕ್ಷಿಣ ಭಾರತೀಯರು ತಮ್ಮ ಪೂರ್ವಭಾವಿ ಹಣಕಾಸು ಯೋಜನೆಗಳತ್ತ ಒಲವು ತೋರಿದ್ದಾರೆ. * ಆದರೆ, ಇತರೆ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಲೈಫ್ ಇನ್ಶೂರೆನ್ಸ್ ವಿಭಾಗದಲ್ಲಿ ಕಡಿಮೆ ಆಸಕ್ತಿ ಹೊಂದಿದ್ದಾರೆ. * ಕೋವಿಡ್-19 ನಲ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಆತಂಕಕ್ಕೀಡು ಮಾಡಿದ ವಿಚಾರಗವೆಂದರೆ ಉದ್ಯೋಗ ಭದ್ರತೆ. * ದಕ್ಷಿಣ ಭಾರತದಲ್ಲಿ ಕೋವಿಡ್-19 ನಂತಹ ಚಿಕಿತ್ಸೆಗಾಗಿ ಮತ್ತು ವೈದ್ಯಕೀಯ ತುರ್ತುಪರಿಸ್ಥಿತಿಗಳಿಗಾಗಿ ಉಳಿತಾಯಕ್ಕೆ ಆದ್ಯತೆ ನೀಡಲಾಗಿದೆ. ಆರ್ಥಿಕ ಭದ್ರತೆ ಕಡಿಮೆ: ಆದರೆ, ಆರ್ಥಿಕ ಭದ್ರತೆ ಮಟ್ಟ ದಕ್ಷಿಣ ಭಾರತ ಪ್ರದೇಶದಲ್ಲಿ ಅತ್ಯಂತ ಕಡಿಮೆಯೇ ಇದೆ. ಇಲ್ಲಿ ಶೇ.48 ರಷ್ಟು ಮಂದಿ ಮಾತ್ರ ಆರ್ಥಿಕ ಭದ್ರತೆ ಹೊಂದಿರುವುದಾಗಿ ತಿಳಿಸಿದ್ದರೆ, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಶೇ.53 ರಷ್ಟು ಹಾಗೂ ಪೂರ್ವ ಭಾಗದಲ್ಲಿ ಶೇ.52 ರಷ್ಟು ಮಂದಿ ಭದ್ರತೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.




