HEALTH TIPS

ಸಮಯೋಚಿತ ನಿರ್ಧಾರಗಳು, ಕೋವಿಡ್ ಲಾಕ್ ಡೌನ್ ನೆರವಿನಿಂದ ಅಂದಾಜು 37ರಿಂದ 38 ಸಾವಿರ ಜೀವ ರಕ್ಷಣೆ- ಡಾ. ಹರ್ಷವರ್ಧನ್

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಸೇರಿದಂತೆ ಸರ್ಕಾರ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳಿಂದ ಕೊರೋನಾವೈರಸ್ ನಿಂದ ಅಂದಾಜು 37ರಿಂದ 38 ಸಾವಿರ ಸಾವಿನ ಪ್ರಕರಣಗಳನ್ನು ತಡೆಗಟ್ಟಲು ನೆರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ. 92 ರಷ್ಟು ಅಲ್ಪ ರೋಗ ಲಕ್ಷಣದ ಪ್ರಕರಣಗಳು ವರದಿಯಾಗಿದ್ದು, ಶೇ. 5.8 ರಷ್ಟು ಪ್ರಕರಣಗಳಿಗೆ ಆಮ್ಲಜನಕ ಥೆರಪಿಯ ಅಗತ್ಯವಿದೆ. ಶೇ.1.7 ರಷ್ಟು ಪ್ರಕರಣಗಳು ತುರ್ತು ನಿಗಾ ಘಟಕದಲ್ಲಿರುವುದಾಗಿ ಹೇಳಿದರು. ಸೆಪ್ಟೆಂಬರ್ 11ಕ್ಕೆ ಒಟ್ಟಾರೇ ಸೋಂಕಿತ ಪ್ರಕರಣಗಳ ಸಂಖ್ಯೆ 45,62, 414 ಆಗಿದ್ದು, 76,271 ಸಾವಿನ ಪ್ರಕರಣಗಳಾಗಿವೆ. ಈ ಮೂಲಕ ಮರಣ ಪ್ರಮಾಣ ಶೇ. 1.67ರಷ್ಟು ವರದಿಯಾಗಿರುವುದಾಗಿ ಆರೋಗ್ಯ ಸಚಿವರು ತಿಳಿಸಿದರು. ಕೇಂದ್ರ ಸರ್ಕಾರವು ಉನ್ನತ ಮಟ್ಟದ ರಾಜಕೀಯ ಬದ್ಧತೆಯೊಂದಿಗೆ ಕೋವಿಡ್-19 ಸವಾಲನ್ನು ಕೈಗೆತ್ತಿಕೊಂಡಿದೆ ಎಂದು ಪ್ರತಿಪಾದಿಸಿದ ಅವರು, ರಾಷ್ಟ್ರವ್ಯಾಪಿ ಲಾಕ್ ಡೌನ್, ಸರ್ಕಾರವು ಸಮುದಾಯವನ್ನು ಸರಿಯಾಗಿ ಒಳಗೊಳ್ಳುವ ಒಂದು ದಿಟ್ಟ ನಿರ್ಧಾರವಾಗಿದ್ದು, ಕೋವಿಡ್-19ನ್ನು ಪರಿಣಾಮಕಾರಿಯಾಗಿ ಎದುರಿಸಲು ಇಡೀ ದೇಶ ಒಟ್ಟಾಗಿ ನಿಂತಿದೆ ಮತ್ತು ಅದರ ಆಕ್ರಮಣಕಾರಿ ಪ್ರಗತಿಯನ್ನು ಯಶಸ್ವಿಯಾಗಿ ಮೊಟಕುಗೊಳಿಸಲಾಗಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries