ಲೋಕಸಭೆಯಲ್ಲಿ ರೈತರ ಉತ್ಪನ್ನದ ಮಾರಾಟ ಮತ್ತು ವಾಣಿಜ್ಯ ಮಸೂದೆ ಮಂಡನೆ
0
ಸೆಪ್ಟೆಂಬರ್ 14, 2020
ನವದೆಹಲಿ: ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಆಯ್ಕೆಯ ಸ್ವಾತಂತ್ರ್ಯ ಒದಗಿಸುವ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ನರೇಂದ್ರ ಸಿಂಗ್ ತೋಮರ್, 'ರೈತರ ಉತ್ಪನ್ನಗಳ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸೌಲಭ್ಯ) ಮಸೂದೆ, 2020' ಮಂಡಿಸಿದರು. ಈ ಕರಡು ಮಸೂದೆ ಸ್ಪರ್ಧಾತ್ಮಕ ಪರ್ಯಾಯ ವ್ಯಾಪಾರ ವಾಹಿನಿಗಳ ಮೂಲಕ ದರವನ್ನು ಸುಗಮಗೊಳಿಸುತ್ತದೆ.
ರೈತರ ಉತ್ಪನ್ನಗಳ ಪರಿಣಾಮಕಾರಿ, ಪಾರದರ್ಶಕ ಮತ್ತು ತಡೆರಹಿತ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಅಥವಾ ವಿವಿಧ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಶಾಸನಗಳ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸುತ್ತದೆ.
Tags





