HEALTH TIPS

ಕೇರಳದಲ್ಲಿ ಇಂದು 4538 ಜನರಿಗೆ ಕೋವಿಡ್-ಕಾಸರಗೋಡು 122 ಮಂದಿಗೆ ಸೋಂಕು

     

         ತಿರುವನಂತಪುರ: ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿದ್ದು ಇಂದು 4538 ಮಂದಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. 

                 ರಾಜ್ಯದಲ್ಲಿ ಸಂಕೀರ್ಣ ಸ್ಥಿತಿ:

      ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕೇರಳದಲ್ಲಿ ಸಂಕೀರ್ಣತೆ ಎದುರಾಗಿದೆ.  ಅಂಕಿಅಂಶಗಳು ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸಂಪರ್ಕದ ಮೂಲಕ ಸೋಂಕು ಹೆಚ್ಚಳಗೊಂಡಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಳಗೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವ  ಜನರ ಸಂಖ್ಯೆ ಹೆಚ್ಚಿದೆ. ಸೋಂಕಿತ ಜನರ ಸಂಖ್ಯೆ ಹೆಚ್ಚಾದಂತೆ ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಳವಾಗಿದೆ.

             ಸೋಂಕು ಬಾಧಿತರ:

    ಕೋಝಿಕ್ಕೋಡ್ 918, ಎರ್ನಾಕುಳಂ 537, ತಿರುವನಂತಪುರ 486, ಮಲಪ್ಪುರಂ 405, ತೃಶೂರ್ 383, ಪಾಲಕ್ಕಾಡ್ 378, ಕೊಲ್ಲಂ 341, ಕಣ್ಣೂರು 310, ಆಲಪ್ಪುಳ 249, ಕೋಟ್ಟಯಂ 213, ಕಾಸರಗೋಡು 122, ಇಡುಕ್ಕಿ 114, ವಯನಾಡ್ 44 ಎಂಬಂತೆ ಜಿಲ್ಲಾ ಮಟ್ಟದ ಪಾಸಿಟಿವ್ ವಿವರಗಳಾಗಿದೆ.

     ಕೋವಿಡ್ ಬಾಧಿಸಿ 20 ಮಂದಿಗಳ ಮೃತ್ಯು ಖಚಿತಪಡಿಸಲಾಗಿದೆ. ತಿರುವನಂತಪುರ ನೆಯ್ಯಾಟಿಂಗರದ ಕರುಣಾಕರನ್ ನಾಯರ್(79), ನರುವಮುಂಡ್ ನ ಬಾಲಕೃಷ್ಣನ್(85), ವೆಂಝಾರಮೂಡ್ ನ ವಿಜಯಮ್ಮ(68), ಆಲಪ್ಪುಳ ಚೇರ್ತಲದ ವೇಣು(40), ಆಲಪ್ಪುಳದ ರಾಧಾಕೃಷ್ಣನ್(69), ಕೋಟ್ಟಯಂ ಚೆಂಗನಾಶ್ಚೇರಿಯ ಹಸೀನಾ(48), ನಿಲವೆನ್ನೂರ್ ನ ಶೈನ್ ಸುರಬಿ(44), ಚೆಂಗನಾಶ್ಚøರಿಯ ಮಣಿಯಪ್ಪನ್(63), ಮಲಪ್ಪುರಂ ವೆಂಗರದ ಆಯಿಷಾ(77), ಕವನ್ನೂರ್ ನ ಮಮ್ಮದ್(74), ತಿರುರಂಗಾಡಿಯ ಲಿಲಾರ್(68), ಕೋಝಿಕ್ಕೋಡ್ ವಡಗರದ ಕೆ.ಎಲ್.ನಸೀರ್(42), ವೇಳಂ ನ ಮೊಯ್ದು(66), ತೂಣೇರಿಯ ಕುಂಞಂಬುಳ್ಳ(70),ತೆಂಕನ್ ತೋಟದ ಮೊಹಮ್ಮದ್ ಶಾಜಿ(53), ಕಾಸರಗೋಡು ಕುತ್ತಳಿಯ ಹಕೀಂ(80), ಮೊಗ್ರಾಲ್ ಪುತ್ತೂರಿನ ಐಸಮ್ಮ(58), ಕಾಸರಗೋಡು ನಗರದ ಕಮಲ(60), ಪಿಲಿಕ್ಕೋಡ್ ನ ಸುಂದರನ್(61) ಕೋವಿಡ್ ಬಾಧಿಸಿ ಮರಣಪಟ್ಟವರಾಗಿದ್ದು ಒಟ್ಟು ಮೃತರ ಸಂಖ್ಯೆ 697ಕ್ಕೆ ಏರಿಕೆಯಾಗಿದೆ.

   

     ಇಂದು ಸೋಂಕು ಬಾಧಿಸಿದವರಲ್ಲಿ 47 ಮಂದಿ ವಿದೇಶದಿಂದ, 166 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ. 3997 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 249 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಒಟ್ಟು 4246 ಮಂದಿಗೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. 

   ಕೋಝಿಕ್ಕೋಡ್ 908, ಎರ್ನಾಕುಳಂ 504, ತಿರುವನಂತಪುರ 463, ಮಲಪ್ಪುರಂ 389, ತೃಶೂರ್ 372, ಪಾಲಕ್ಕಾಡ್ 307, ಕೊಲ್ಲಂ 340, ಕಣ್ಣೂರು 256, ಆಲಪ್ಪುಳ 239, ಕೋಟ್ಟಯಂ 208, ಕಾಸರಗೋಡು 111, ಇಡುಕ್ಕಿ 76, ವಯನಾಡ್ 42, ಪತ್ತನಂತಿಟ್ಟು 31 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

    ಇಂದು 67 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸಂಪರ್ಕದಿಂದ ಸೋಂಕು ಉಂಟಾಗಿದೆ. ಕಣ್ಣೂರು 20, ತಿರುವನಂತಪುರ 17. ಎರ್ನಾಕುಳಂ 9, ಕೋಝ್ಜಿಕೋಡ್ 6, ತೃಶೂರ್ 5, ಕಾಸರಗೋಡು 3, ಆಲಪ್ಪುಳ, ಕೋಟ್ಟಯಂ, ಮಲಪ್ಪುರಂ ತಲಾ 2, ವಯನಾಡ್ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ. ಎರ್ನಾಕುಳಂ ಜಿಲ್ಲೆಯ 12 ಐಎಲ್.ಎಚ್.ಎಸ್ ಉದ್ಯೋಗಿಗಳಿಗೂ ಕೋವಿಡ್ ಬಾಧಿಸಿದೆ. 

     ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿದ್ದ 3347 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ತಿರುವನಂತಪುರ 506, ಕಲ್ಲಂ 182, ಪತ್ತನಂತಿಟ್ಟು 150, ಆಲಪ್ಪುಳ 349, ಕೋಟ್ಟಯಂ 122, ಇಡುಕ್ಕಿ 36, ಎರ್ನಾಕುಳ 220, ತೃಶೂರ್ 240, ಪಾಲಕ್ಕಾಡ್ 200, ಮಲಪ್ಪುರಂ 421, ಕೋಝಿಕ್ಕೋಡ್ 645, ವಯನಾಡ್ 63, ಕಣ್ಣೂರು 124, ಕಾಸರಗೋಡು 89 ಮಂದಿಗಳು ಗುಣಮುಖರಾದರು. ಈವರೆಗೆ 57, 879 ಮಂದಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 1,21,268 ಮಂದಿ ಸೋಂಕು ಮುಕ್ತರಾಗಿರುವರು. 

   ರಾಜ್ಯಾದ್ಯಂತ 2,32,450 ಮಂದಿ ನಿರೀಕ್ಷಣೆಯಲ್ಲಿದ್ದಾರೆ. 2,03,330 ಮಂದಿ ಮನೆ ಹಾಗೂ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ, 29,120 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. 3255 ಮಂದಿಗಳನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries