ಉಪ್ಪಳ: ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ(69) ಅಲ್ಪ ಕಾಲದ ಅಸೌಖ್ಯ ಕಾರಣ ಕಾಸರಗೋಡಿನ ಖಾಸಗೀ ಆಸ್ಪತ್ರೆಯಲ್ಲಿ ಚಕಿತ್ಸೆಯಲ್ಲಿದ್ದವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು.
ಪೈವಳಿಕೆ ಬಾಯಾರು ಪೆರ್ವೊಡಿ ನಿವಾಸಿಯಾದ ಇವರು ಕರ್ನಾಟಕದ ವಿವಿಧೆಡೆ ಗ್ರಾಮಾಧಿಕಾರಿಗಳಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ವಿ.ಹಿಂ.ಪ ಮಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವಾ ಪ್ರವೃತ್ತರಾಗಿ ಕಳೆದ ಹತ್ತು ವರ್ಷಗಳಿಂದ ಕಾಸರಗೋಡು ಜಿಲ್ಲಾ ವಿ.ಹಿಂ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರದಲ್ಲಿ ನಿರ್ಮಾಣಗೊಂಡಿರುವ ವಿ.ಹಿಂ.ಪ. ಜಿಲ್ಲಾ ಕಾರ್ಯಾಲಯ ಪ್ರೇರಣಾದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.





