ಭಾರೀ ಇಳಿಕೆ ಕಂಡ ಸೋಂಕು!-ಕಾಸರಗೋಡು : 56 ಮಂದಿಗೆ ಸೋಂಕು ದೃಢ
0
ಸೆಪ್ಟೆಂಬರ್ 14, 2020
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 56 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ 135 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 52 ಮಂದಿಗೆ ರೋಗ ಬಾ„ಸಿದೆ. ಇತರ ರಾಜ್ಯಗಳಿಂದ ಹಾಗು ವಿದೇಶದಿಂದ ಬಂದ ತಲಾ ಇಬ್ಬರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಒವಿ.ರಾಮದಾಸ್ ತಿಳಿಸಿದ್ದಾರೆ.
ಇದು ವರೆಗೆ ಜಿಲ್ಲೆಯಲ್ಲಿ 7250 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 621 ಮಂದಿ ವಿದೇಶದಿಂದ, 461 ಮಂದಿ ಇತರ ರಾಜ್ಯಗಳಿಂದ ಬಂದವರು. 6168 ಮಂದಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಈ ವರೆಗೆ 5322 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1872 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 56 ಮಂದಿ ಸಾವಿಗೀಡಾಗಿದ್ದಾರೆ.
ರೋಗ ಬಾಧಿತರು : ವಲಿಯಪರಂಬ-1, ಈಸ್ಟ್ ಎಳೇರಿ-1, ಅಜಾನೂರು-5, ಪಳ್ಳಿಕರೆ-6, ಉದುಮ-1, ಬೇಡಡ್ಕ-1, ಮಧೂರು-6, ಕಾಂಞಂಗಾಡ್-3, ಕಾಸರಗೋಡು-6, ಪುಲ್ಲೂರು-4, ಕೋಡೋಂ ಬೇಳೂರು-1, ಮಂಗಲ್ಪಾಡಿ-9, ಬದಿಯಡ್ಕ-2, ಮಂಜೇಶ್ವರ-2, ಪಡನ್ನ-1, ಪೈವಳಿಕೆ-1, ಚೆಮ್ನಾಡ್-1, ಮುಳಿಯಾರು-1, ಮೊಗ್ರಾಲ್‍ಪುತ್ತೂರು-1, ವರ್ಕಾಡಿ-1, ಪಿಲಿಕೋಡ್-1, ಚೆಂಗಳ-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 2450 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಸೋಮವಾರ 2450 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 2110 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ಸಾವಿಗೆ ಕೊರೊನಾ ಕಾರಣವೆಂಬುದಾಗಿ ಖಾತರಿಯಾಗಿದೆ. 2346 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 64 ಮಂದಿ ಆರೋಗ್ಯ ಕಾರ್ಯಕರ್ತರಿಗೂ ರೋಗ ಬಾಧಿಸಿದೆ.
ರೋಗ ಬಾಧಿತರು : ಮಲಪ್ಪುರಂ-482, ಕಲ್ಲಿಕೋಟೆ-382, ತಿರುವನಂತಪುರ-332, ಎರ್ನಾಕುಳಂ-255, ಕಣ್ಣೂರು-232, ಪಾಲ್ಘಾಟ್-175, ತೃಶ್ಶೂರು-161, ಕೊಲ್ಲಂ-142, ಕೋಟ್ಟಯಂ-122, ಆಲಪ್ಪುಳ-107, ಇಡುಕ್ಕಿ-58, ಕಾಸರಗೋಡು-56, ವಯನಾಡು-20, ಪತ್ತನಂತಿಟ್ಟ-16 ಎಂಬಂತೆ ರೋಗ ಬಾ„ಸಿದೆ.
ರೋಗ ಮುಕ್ತ : ತಿರುವನಂತಪುರ-415, ಕೊಲ್ಲಂ-165, ಪತ್ತನಂತಿಟ್ಟ-103, ಆಲಪ್ಪುಳ-198, ಕೋಟ್ಟಯಂ-121, ಇಡುಕ್ಕಿ-25, ಎರ್ನಾಕುಳಂ-125, ತೃಶ್ಶೂರು-140, ಪಾಲ್ಘಾಟ್-93, ಮಲಪ್ಪುರಂ-261, ಕಲ್ಲಿಕೋಟೆ-123, ವಯನಾಡು-76, ಕಣ್ಣೂರು-135, ಕಾಸರಗೋಡು-130 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 30,486 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 79,8113 ಮಂದಿ ಗುಣಮುಖರಾಗಿದ್ದಾರೆ.
ಮುಳಿಯಾರು ಪಂಚಾಯತ್ ಒಂದು ವಾರ ಬಂದ್ : ಮುಳಿಯಾರು ಪಂಚಾಯತ್‍ನ ಸದಸ್ಯರೋರ್ವರಿಗೆ ಕೋವಿಡ್ ಖಚಿತವಾದ ಹಿನ್ನೆಲೆಯಲ್ಲಿ ಮುಳಿಯಾರು ಪಂಚಾಯತ್ ಕಚೇರಿಯನ್ನು ಒಂದು ವಾರ ಕಾಲ ಮುಚ್ಚಲಾಗಿದೆ. ಕೋಟೂರಿನಲ್ಲಿ ನಡೆಸಿದ ಆಂಟಿಜೆನ್ ತಪಾಸಣೆಯಲ್ಲಿ ಪಂಚಾಯತ್ ಸದಸ್ಯನಿಗೂ, ಪತ್ನಿಗೂ, ಮಕ್ಕಳಿಗೂ ಕೋವಿಡ್ ಖಚಿತವಾಗಿತ್ತು. ಪತ್ನಿ ದುಡಿಯುವ ಸಹಕಾರಿ ಸಂಸ್ಥೆಯನ್ನು ಕೂಡಾ ಒಂದು ವಾರಕ್ಕೆ ಮುಚ್ಚಲಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ ಎಲ್ಲರೂ ಕೂಡಾ ನಿಗಾದಲ್ಲಿರಲು ಸೂಚಿಸಲಾಗಿದೆ. ಎರಿಂಜೇರಿ ಕಾಲನಿಯಲ್ಲಿ ಕೋವಿಡ್ ಉಂಟಾದಾಗ ಅಲ್ಲಿ ವ್ಯವಸ್ಥೆಗೊಳಿಸಲು ಇವರು ತೆರಳಿದ್ದು, ಅಲ್ಲಿಂದ ಕೋವಿಡ್ ತಗಲಿರಬಹುದೆಂದು ಆರೋಗ್ಯ ಇಲಾಖೆ ಶಂಕಿಸಿದೆ.
Tags





