HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಹಿರಿಯ ಪ್ರಜೆಗಳ ಕಲ್ಯಾಣ ಕಾಲ್ ಸೆಂಟರ್ ಚಟುವಟಿಕೆ ಆರಂಭ

        

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹಿರಿಯ ಪ್ರಜೆಗಳ ಕಲ್ಯಾಣ ಕಾಲ್ ಸೆಂಟರ್ ಚಟುವಟಿಕೆ ಆರಂಭಿಸಿದೆ.  

         ಕೋವಿಡ್ 19 ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಿವಸರ್ಸ್ ಕ್ವಾರೆಂ ಟೈನ್ ನಲ್ಲಿ ದಾಖಲಾಗಿರುವ ವಯೋವೃದ್ಧರಿಗಾಗಿ ಈ ಸೌಲಭ್ಯ ಪ್ರಾರಂಭವಾಗಿದೆ. ಹಿರಿಯ ಪ್ರಕೆಜಗಳ ಆರೋಗ್ಯ ಸಂರಕ್ಷಣೆ, ಟೆಲಿ ಮೆಡಿಸಿನ್ ಸೌಲಭ್ಯಗಳು, ಆರೋಗ್ಯ ಸುರಕ್ಷೆ ಇತ್ಯಾದಿ ಖಚಿತಪಡಿಸುವ ನಿಟ್ಟಿನಲ್ಲಿ ಕಾಞಂಗಾಡಿನ ಚೆಮ್ಮಟ್ಟುಂವಯಲ್ ನ ವಿಜ್ಞಾನ ಪಾರ್ಕ್ ಮಟ್ಟಡದಲ್ಲಿ ಜಿಲ್ಲಾ ವಯೋ ಕ್ಷೇಮ ಕಾಲ್ ಸೆಂಟರ್ ಆರಂಭವಾಗಿದೆ.

       ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಿರಿಯ ಪ್ರಜೆಯೊಬ್ಬರಿಗೆ ಕರೆಮಾಡಿ ಯೋಗಕ್ಷೇಮ ವಿಚಾರಣೆ ನಡೆಸುವ ಮೂಲಕ ಸೆಂಟರ್ನ ಚಟುವಟಿಕೆಗಳಿಗೆ ಚಾಲನೆ ನೀಡಿದರು. 

    ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಸಹಾಯಕ ಜಿಲ್ಲಾ ಜಿಲ್ಲಾ ವೈದ್ಯಧಿಕಾರಿ ಡಾ.ಎ.ಟಿ.ಮನೋಜ್, ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್, ಜಿಲ್ಲಾ ಸಮಾಜ ನೀತಿ ಅಧಿಕಾರಿ ಪಿ.ಬಿಜು, ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಕೆ.ಎಸ್.ಎಂ. ಜಿಲ್ಲಾ ಸಂಚಾಲಕಿ ಜಿಷೋ ಜೇಮ್ಸ್, ಬಿ.ಎಸ್.ಎನ್.ಎಲ್. ಉಪ ವಿಭಾಗ ಇಂಜಿನಿಯರ್ ಪಿ.ಪಿ.ಸುರೇಂದ್ರನ್, ಶಿಶು  ಅಭಿವೃದ್ಧಿ ಯೋಜನೆ ಅಧಿಕಾರಿ ಷೈನಿ, ಕುಟುಂಬಶ್ರೀ, ಐ.ಸಿ.ಡಿ.ಎಸ್., ನ್ಯಾಷನಲ್ ನ್ಯೂಟ್ರೀಷಿಯನ್ ಮಿಷನ್, ಆರೋಗ್ಯ ಇಲಾಖೆ ಪ್ರತಿನಿಧಿಗಳು ಉಪಸ್ಥಿತರಿದ್ದರು. 

                    ವಯೋವೃದ್ಧರು ಕರೆಮಾಡಬಹುದು:

    ಹಿರಿಯ ಪ್ರಜೆಗಳು 04672289000 ಎಂಬ ನಂಬ್ರಕ್ಕೆ ಕರೆ ಮಾಡಿ ಸೇವೆ ಪಡೆಯಬಹುದು. ಈ ಸೆಂಟರ್ ಗಾಗಿ 2 ಪಾಳಿಯಲ್ಲಿ 4 ಬ್ಯಾಚ್ ನಲ್ಲಿ 40 ಸಿಬ್ಬಂದಿ ಸ್ವಯಂ ಸೇವೆ ನಡೆಸಲಿದ್ದಾರೆ. ವಯೋವೃದ್ಧರಿಗಿರುವ ಔಷಧ, ಟೆಲಿ ಮೆಡಿಸಿನ್, ವೈದ್ಯರ ಸಹಾಯ ಇತ್ಯಾದಿ ಸಂಬಂಧ ಸೇವೆಗಳಿಗೆ ಕರೆಮಾಡಬಹುದು. ದೂರುಗಳಿದ್ದಲ್ಲಿ ಅವುಗಳ ಪರಿಹಾರಕ್ಕೆ ಕಾಸರಗೋಡು ಜಿಲ್ಲೆಯ ಎಲ್ಲ ವಯೋಮಿತ್ರ ಯೂನಿಟ್ ಗಳ ಸೇವೆ ಬಳಸಿಕೊಳ್ಳಲಾಗುವುದು. ತುರ್ತು ಸಂದರ್ಭಗಳಲ್ಲಿ ಕಾಲ್ ಸೆಂಟರ್ ಬಳಿಯ ಕಾಞಂಗಾಡ್ ಶಿಶು ಅಭೀವೃಧ್ಧಿ ಯೋಜನೆ ಅಧಿಕಾರಿ ಸಹಾಯ ಒದಗಿಸುವ ಖಚಿತತೆ ನಡೆಸುವರು. ವಿವಿಧ ಇಲಾಖೆಗಳ ಸಿಬ್ಬಂದಿ, ಸ್ವಯಂ ಸೇವಕರು ಕಾಲ್ ಸೆಂಟರ್ ಗಳಿಗೆ ಸಹಕಾರ ನೀಡುವರು. 

       ಕಾಲ್ ಸೆಂಟರ್ ನ ಕರ್ತವ್ಯಕ್ಕಾಗಿ ಹೈಯರ್ ಸೆಕಂಡರಿ ಶಾಲೆ ಶಿಕ್ಷಕರು, ಸ್ವಯಂ ಸೇವಕರು, ಅಂಗನವಾಡಿ ಕಾರ್ಯಕರ್ತರು, ಮೈಂ ಟೆನೆನ್ಸ್ ಟ್ರಿಬ್ಯೂನಲ್ ಟೆಕ್ನಿಕಲ್ ಅಸಿಸ್ಟೆಂಟ್ ಗಳು ಮೊದಲಾದವರು ಸೇವೆ ಸಲ್ಲಿಸುವರು. ಪ್ರತಿದಿನದ ಚಟುವಟಿಕೆಗಳ ಏಕೀಕಿರಣದ ಹೊಣೆ ಜಿಲ್ಲಾ ಸಮಾಜ ನೀತಿ ಕಚೇರಿಯ ಪ್ರಭಾರ ಹಿರಿಯ ವರಿಷ್ಠಾಧಿಕಾರಿ ಎಂ.ಅಬ್ದುಲ್ಲ ಅವರಿಗೆ ಇರುವುದು. 

       ನಗರ ಸಭೆ ಮಟ್ಟದಲ್ಲಿರುವ ವಯೋಜನತೆಯ ಆರೋಗ್ಯ ಸಮಸ್ಯೆಗಳು, ಟೆಲಿ ಮೆಡಿಸಿನ್, ಜೀವನ ಶೈಲಿ ರೋಗಳಿಗೆ ಔಷಧ ವಿತರಣೆ ಇತ್ಯಾದಿ ಚಟುವಟಿಕೆಗಳ ಏಕೀರಣವನ್ನು ಜಿಲ್ಲೆಯ ವಯೋಮಿತ್ರ ಸಂಚಾಲಕ ನಡೆಸುವರು. ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳ ಹಿರಿಯ ಪ್ರಜೆಗಳ ಆರೋಗ್ಯ ಸಮಸ್ಯೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ, ಮೊಬೈಲ್ ಮೆಡಿಕಲ್ ಸರ್ವೆಲೆನ್ಸ್ ತಂಡ (ಎಂ.ಎಂ.ಎಸ್.ಟಿ.), ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕರ ಮುಖಾಂತರ ಮೆಡಿಕಲ್ ಕಚೇರಿ ಏಕೀಕರಣ ನಡೆಸಲಿದೆ. ಸದ್ರಿ ಆರೋಗ್ಯ, ಕುಟುಂಬಶ್ರೀ, ಮಹಿಳಾ ಶಿಶು ಅಭಿವೃದ್ಧಿ, ಸಮಾಜ ನೀತಿ ಇಲಾಖೆಗಳು, ಕೇರಳ ಸಮಾಜ ಸುರಕ್ಷಾ ಕಾವಲು ಮಿಷನ್, ವಯೋಮಿತ್ರ ಯೂನಿಟ್ ಗಳು, ಮೈಂಟೆನೆನ್ಸ್ ಟ್ರಿಬ್ಯೂನಲ್ ಇತ್ಯಾದಿಗಳ ಮುಖಾಂತರ ಸೇವೆಗಳು ಕಾಲ್ ಸಎಂಟರ್ ಮೂಲಕ ಏಕೀಕರಣ ನಡೆಸಲಾಗುವುದು ಎಂದು ಸಮಾಜ ನೀತಿ ಅಧಿಕಾರಿ ಪಿ.ಬಿಜು ತಿಳಿಸಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries