ಮಂಜೇಶ್ವರ: ಎಸ್. ಎನ್.ಡಿ.ಪಿ ಮಂಜೇಶ್ವರ ಶಾಖಾ ಸಮಿತಿ ವತಿಯಿಂದ ಶ್ರೀ ನಾರಾಯಣ ಗುರು ಸಮಾಧಿ ದೀಪ ಪ್ರಜ್ವಲನಾ ಕಾರ್ಯಕ್ರಮ ಕನೀಲ ಶ್ರೀ ಭಗವತಿ ಕ್ಷೇತ್ರದಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು.
ಎಸ್.ಎನ್. ಡಿ.ಪಿ ಮಂಜೇಶ್ವರ ಶಾಖ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ ದೀಪ ಪ್ರಜ್ವಲನಗೈಯುವ ಮೂಲಕ ಆಚರಣೆಗೆ ನಾಂದಿ ಹಾಡಿದರು.
ಈ ವೇಳೆ ಕಾಸರಗೋಡು ಯೂನಿಯನ್ ಅಧ್ಯಕ್ಷ ನಾರಾಯಣ ಕನಿಲ, ಎಸ್.ಎನ್.ಡಿ.ಪಿ ಮಂಜೇಶ್ವರ ಶಾಖಾ ಕಾರ್ಯದರ್ಶಿ ದೇವರಾಜ್ ಎಂ.ಎಸ್, ನೇತಾರರಾದ ಪದ್ಮನಾಭ ಕಡಪ್ಪರ, ಯಾದವ ಎ.ಎಸ್, ರಮೇಶ್ ಬಿ.ಎಂ, ಮೊದಲಾದವರು ಉಪಸ್ಥಿತರಿದ್ದರು.





