ಕಾಸರಗೋಡು: ಜಿಲ್ಲೆಯ ಪ್ರಮುಖ ಜನವಸತಿ ಪ್ರದೇಶವಾದ ಉದುಮ ಪಳ್ಳಿಕ್ಕೆರೆ ಪಂಚಾಯಿತಿಗಳ ಮೂಲಕ ಹಾದುಹೋಗುವ ಕೋಟಿಕುಳಂ ತಚ್ಚಂಗಾಡ್ ರಸ್ತೆಯನ್ನು ಕಂದಾಯ ಮತ್ತು ವಸತಿ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದರು.
ಉದುಮ ಶಾಸಕ ಕೆ. ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಕೋಟಿಕುಳಂ ತಚ್ಚಂಗಾಡ್ ರಸ್ತೆ ಅಭಿವೃದ್ಧಿಯ ಮೊದಲ ಹಂತದಲ್ಲಿ 2.200 ಕಿ.ಮೀ ಬಜೆಟ್‍ನಲ್ಲಿ ಸೇರಿಸಲಾಗಿದ್ದು, 2018 ರಲ್ಲಿಯೇ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 4.200 ಕಿ.ಮೀ ದೂರವನ್ನು ಅಭಿವೃದ್ಧಿಪಡಿಸಲಾಯಿತು. ಮೂರನೇ ಹಂತದಲ್ಲಿ, 5 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 4 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಂಡ ಈ ರಸ್ತೆ ಉದುಮ ಪಳ್ಳಿಕ್ಕೆರೆ ಪಂಚಾಯಿತಿಗಳು ಮತ್ತು ಇತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ತಚ್ಚಂಗಾಡ್ ಕಾಸರಗೋಡು ಲೋಕೋಪಯೋಗಿ ರಸ್ತೆ ಪಾಲಕ್ಕುನ್ನು ಪಟ್ಟಣದಿಂದ ಪ್ರಾರಂಭವಾಗಿ ಬೇಕಲದಲ್ಲಿ ಕೊನೆಗೊಳ್ಳುತ್ತದೆ. 5.50 ಮೀ ಅಗಲವಿರುವ 5 ಕಿ.ಮೀ ವಿಸ್ತಾರವನ್ನು ಟಾರ್ ಮಾಡಲಾಗಿದೆ ಮತ್ತು ಸುರಕ್ಷತಾ ವ್ಯವಸ್ಥೆ ಸ್ಥಾಪಿಸಿ ನಾಡಿಗೆ ಹಸ್ತಾಂತರಿಸಲಾಗಿದೆ.
ಪಿಡಬ್ಲ್ಯೂಡಿ ರಸ್ತೆಗಳ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಪಿ.ವಿನೋದ್ ಅವರು ವರದಿಯನ್ನು ಮಂಡಿಸಿದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಂ. ಗೌರಿ, ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಪಿ. ಇಂದಿರಾ, ಉದುಮ ಪಂಚಾಯತ್ ಅಧ್ಯಕ್ಷ ಕೆ. ಮೊಹಮ್ಮದ್ ಅಲಿ, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಅಧ್ಯಕ್ಷ ವಿ.ವಿ.ಸುಕುಮಾರ ಸ್ವಾಗತಿಸಿ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಎಸ್. ಪ್ರಕಾಶನ್ ವಂದಿಸಿದರು.


