ಬದಿಯಡ್ಕ: ವಿಶಾಲ ಕಾಸರಗೋಡಿನ ವೈವಿಧ್ಯಮಯ ಜನಜೀವನವು ಬಹುತ್ವದಲ್ಲಿ ಏಕತೆಯನ್ನು ಪ್ರತಿನಿಧಿಕರಿಸಿದ ವಿಶಿಷ್ಟತೆಯಾಗಿ ಶ್ರೀಮಂತಿಕೆಯನ್ನು ಮೆರೆದಿತ್ತು. ಇಲ್ಲಿಯ ಕನ್ನಡ, ತುಳು, ಕೊಂಕಣಿ, ಮಲೆಯಾಳಿ ಮೊದಲಾದ ಬೇಧಗಳಿಲ್ಲದೆ ತುಳು ಸಾಂಸ್ಕøತಿಕತೆಯ ಬೇರುಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದೆವು. ಆದರೆ ಇತ್ತೀಚೆಗೆ ನಮ್ಮನ್ನು ಇನ್ನೊಂದು ಏಕ ಭಾಷೆಯ ಸಂಸ್ಕøತಿಗೆ ಪ್ರಭಾವಗೊಳಿಸುವ ಯತ್ನ ನಡೆಯುತ್ತಿರುವುಉದ ಖೇದಕರ ಎಮದು ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ-ಸಂಶೋಧಕ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅವರು ತಿಳಿಸಿದರು.
ಬದಿಯಡ್ಕದ ತುಳುವೆರೆ ಆಯನೊ ಕೂಟದ ಆಶ್ರಯದಲ್ಲಿ ಬದಿಯಡ್ಕ ಕ್ರಿಯೆಟಿವ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ನೀರ್ ನೀರ್ ನಿರ್ನಾಲ್ ವಿಶೇಷ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲ ಭಾಷೆ, ಸಂಸ್ಕøತಿಯನ್ನು ಬದಿಗಿರಿಸಿ ಅನ್ಯ ಭಾಷೆಯ ಹೇರುವಿಕೆಗೆ ನಾವು ಒಳಗಾಗುವುದು ಭವಿಷ್ಯದ ಅತಂತ್ರತೆಗೆ ಖಂಡಿತಾ ಕಾರಣವಾಗುವುದು. ಈ ನಿಟ್ಟಿನಲ್ಲಿ ನಮ್ಮತನವನ್ನು ಗಟ್ಟಿಗೊಳಿಸುವ, ಸಾಂಸ್ಕøತಿಕ, ಸಾಹಿತ್ತಿಕ, ಜನಪದೀಯ ಪರಂಪರೆಯನ್ನು ಮತ್ತೆ ನೆನಪಿಸುವ ಕಾರ್ಯಚಟುವಟಿಕೆಗಳು ಮನೆಮನೆಗಳಲ್ಲೂ ವಿಸ್ತರಿಸಬೇಕು ಎಂದು ಅವರು ಈ ಹಿಂದೆ ಕರೆನೀಡಿದರು.
ತುಳುವೆರೆ ಆಯನೊ ಕೂಟದ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ.ಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ತುಳು ಸಂಸ್ಕøತಿ ತೌಳವ ಭಾಷೆಗೆ ನೀಡಿದ ಕೊಡುಗೆ ಅತ್ಯಪೂರ್ವವಾದುದು. ಹೊಸ ತಲೆಮಾರಿಗೆ ಈ ಬಗ್ಗೆ ಪರಿಚಯ ನೀಡುವ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯಲಿದೆ. ತುಳು ಭಾಷೆಯ ಹೆಸರಲ್ಲಿ ಸವಾರಿಗಳನ್ನು ಮಾಡುವ ಯತ್ನ ಅಂತವರನ್ನು ಅಧಃಪತನಕ್ಕೆ ಕೊಂಡೊಯ್ಯುವುದು ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಾಲ ಪ್ರತಿಭೆ, ಶರಣ್ಯ ಬಂಗೇರ ಅವರು ತುಳು ಸಂಸ್ಕøತಿ, ನಿರ್ನಾಲ್ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ತುಳುನಾಡಿನ ಪ್ರತಿಯೊಂದು ಆಚರಣೆಗಳ ಹಿಂದೆಯೂ ಪ್ರಕೃತಿಯನ್ನು ಸಂಪ್ರೀತಗೊಳಿಸುವ ವಿಜ್ಞಾನ ಅಡಗಿದೆ. ಸರ್ವರ ಒಳಿತನ್ನಷ್ಟೇ ಆಶಿಸುವ ತುಳು ಸಂಸ್ಕøತಿ ನಾವೆಲ್ಲಿದ್ದರೂ ರಕ್ತದಲ್ಲದು ಪ್ರವಹಿಸುತ್ತಿರುತ್ತದೆ. ಆದರೆ ಆಂತರ್ಯದ ಹೊಂಗನಸಾಗಿ ಸದಾಕಾಲ ಭಾಷೆಯ ಸಂವರ್ಧನೆಗೆ ತೊಡಗಿಸಿಕೊಳ್ಳುವ ಮನೋಭಾವವನ್ನು ಮೈಗೂಡಿಸಿಕೊಳ್ಳುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಯೂಟ್ಯೂಬ್ ಮೂಲಕ ಕೊರೊನಾಸ್ತ್ರ ಯಕ್ಷಗಾನ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಗುರು ಜಯರಾಮ ಪಾಟಾಳಿ ಪಡುಮಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಕ್ರಿಯೆಟಿವ್ ಕಾಲೇಜಿನ ಟ್ರಸ್ಟಿ ರಂಗ ಶರ್ಮಾ ಉಪ್ಪಂಗಳ, ಕೆ.ಸಿ.ಪಾಟಾಳಿ ಪಡುಮಲೆ ಉಪಸ್ಥಿತರಿದ್ದು ಶುಭಹಾರೈಸಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು. ಭಾಸ್ಕರ ಕೆ.ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಶೇಷ ಬಹುಭಾಷಾ ಕವಿಗೋಷ್ಠಿ ನಡೆಯಿತು.






