ಉಪ್ಪಳ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಮಂಗಲ್ಪಾಡಿ ಪಂಚಾಯತಿ 19ನೇ ವಾರ್ಡ್ ವತಿಯಿಂದ ಹಿರಿಯರಾದ ಅಂಬಾರು ನಿವಾಸಿ 93 ವರ್ಷದ ಬಟ್ಯಪ್ಪ ಶೆಟ್ಟಿಯವರನ್ನು ಅವರ ಮನೆಗೆ ತೆರಳಿ ಪಂಚಾಯತಿ ಸದಸ್ಯ ಬಾಲಕೃಷ್ಣ ಅಂಬಾರು ಶಾಲು ಹೊದಿಸಿ, ಫಲ ಪುಷ್ಪಗಳನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಬಿಜೆಪಿ ನೇತಾರ ಶ್ರೀಧರ ಬೀರಿಗುಡ್ಡೆ, ಒಬಿಸಿ ಮೋರ್ಚಾ ಮಂಗಲ್ಪಾಡಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಚೆರುಗೋಳಿ ಉಪಸ್ಥಿತರಿದ್ದರು.





