HEALTH TIPS

ಲೈಫ್ ಮಿಷನ್ ಮತ್ತು ರೆಡ್ ಕ್ರೆಸೆಂಟ್‍ನೊಂದಿಗೆ ಸಹಿ ಮಾಡಿದ ಒಪ್ಪಂದದ ಪ್ರತಿ ನೀಡದೆ ಭ್ರಷ್ಟಾಚಾರ-ಚೆನ್ನಿತ್ತಲ

    

      ತಿರುವನಂತಪುರ: ಲೈಫ್ ಮಿಷನ್ ಮತ್ತು ರೆಡ್ ಕ್ರೆಸೆಂಟ್‍ನೊಂದಿಗೆ ಸಹಿ ಹಾಕಿರುವ ಎಂಒ ಪ್ರತಿಯನ್ನು ನೀಡದೆ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಸರ್ಕಾರಕ್ಕೆ ಮರೆಮಾಚಲು ಏನೂ ಇಲ್ಲದಿದ್ದರೆ ಎಂಒ ಪ್ರತಿ ನೀಡುವುದರಲ್ಲಿ ಏನು ಸಮಸ್ಯೆ ಎಂದು ಚೆನ್ನಿತ್ತಲ ಕೇಳಿರುವರು.

        ಲೈಫ್ ಮಿಷನ್ ಬಗ್ಗೆ ಮುಖ್ಯಮಂತ್ರಿ ಇನ್ನೂ ಯಾವುದೇ ವಿವರಣೆಯನ್ನು ನೀಡಿಲ್ಲ. ಬಡವರ ಯೋಜನೆಗೆ ಕೋಟಿ ಖರ್ಚು ಮಾಡಿದ ಬಳಿಕ ಮುಖ್ಯಮಂತ್ರಿ ನೀಡಿದ ಸಮರ್ಥನೆಗಳನ್ನು ಜನರು ತಿರಸ್ಕರಿಸಿದ್ದಾರೆ. ಲೈಫ್ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಏನನ್ನೂ ಹೇಳಲು ಸಿಎಂ ಸಿದ್ಧರಿರದಿರುವುದು ಯಾಕೆ ಎಮದು ಚೆನ್ನಿತ್ತಲ ಕೇಳಿರುವರು.

       ಸರ್ಕಾರದ ಅಸಮರ್ಥ ನಡೆ ಕೇರಳದ ಜನರಿಗೆ ಅವಮಾನಕರವಾಗಿದೆ. ಯಾವುದೇ ಭ್ರಷ್ಟಾಚಾರ ನಡೆದರೂ ಅದನ್ನು ವೈಭವೀಕರಿಸುವುದು ಮುಖ್ಯ ಎನ್ನುವುದನ್ನು ಸರ್ಕಾರ ಭಾವಿಸುತ್ತದೆ. ಲೈಫ್ ಯೋಜನೆಯಲ್ಲಿ ಗಂಭೀರ ಪ್ರಮಾಣದ ರಹಸ್ಯಗಳಿವೆ. ಅದಕ್ಕಾಗಿಯೇ ಮುಖ್ಯಮಂತ್ರಿ ಸತ್ಯಗಳಿಗೆ ಉತ್ತರಿಸಲಾರರು ಎಂದು ಚೆನ್ನಿತ್ತಲ ಲೇವಡಿ ಮಾಡಿರುವರು.

        ರಾಜತಾಂತ್ರಿಕ ಪಾರ್ಸೆಲ್‍ನಲ್ಲಿ 17,000 ಕೆ.ಜಿ ಚಿನ್ನ ರವಾನೆಯಾಗಿರುವ ದಿನಾಂಕ ನಿಗೂಢವಾಗಿದೆ. ದಿನಾಂಕವನ್ನು ಮರೆಮಾಚುವಲ್ಲಿ ಏನಿದೆ ಎಂಬುದನ್ನು ಸರ್ಕಾರ ಸ್ಪಷಟ್ಪಡಿಸಬೇಕು ಎಂದು ಚೆನ್ನಿತ್ತಲ ಆರೋಪಿಸಿದರು. ರಾಜ್ಯ ಶಿಷ್ಟಾಚಾರ ಅಧಿಕಾರಿಯ ಅರಿವಿಲ್ಲದೆ ದಿನಾಂಕಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ಅನುಮೋದಿಸಲಾಗಿದೆಯೇ ಎಂದು ಶಿಷ್ಟಾಚಾರ ಅಧಿಕಾರಿ ಪರಿಶೀಲಿಸಬೇಕು. ಕೇಂದ್ರ ಏಜೆನ್ಸಿಯನ್ನು ಸ್ವಾಗತಿಸಿದ ಸಿಪಿಎಂ, ಕೊಡಿಯೇರಿಯ ಮಗನನ್ನು ಇಡಿ ಪ್ರಶ್ನಿಸಿದಾಗ, ಅವರು ರಾಜಕೀಯ ಆಡುತ್ತಿದ್ದಾರೆ ಎಂದು ಬಾಲಿಶವಾಗಿ ಹೇಳಿಕೆ ನೀಡಿರುವರು. ಈ ಹಿಂದೆ ಕೇಂದ್ರ ಸಂಸ್ಥೆಗಳ ತನಿಖೆ ಅತ್ಯುತ್ತಮವಾಗಿದೆ ಎಂದು ಸಿಎಂ ಹೇಳಿದ್ದರು. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕೆಲವು ಜನರ ಹೃದಯ ಬಡಿತ ಹೆಚ್ಚಾಗುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ ಎಂದು ಚೆನ್ನಿತ್ತಲ ಹೇಳಿರುವರು. 

       ಈಗ ಜಯರಾಜನ್, ಕೊಡಿಯೇರಿ ಮತ್ತು ಜಲೀಲ್ ಅವರ ಹೃದಯ ಬಡಿತ ತೀವ್ರಗೊಂಡಂತಿದೆ. ಇ.ಪಿ. ಜಯರಾಜನ್ ಅವರ ಪತ್ನಿ ತರಾತುರಿಯಲ್ಲಿ ಬ್ಯಾಂಕಿಗೆ ತೆರಳಿ  ಲಾಕರ್‍ನಿಂದ ಹಣ, ಚಿನ್ನಗಳನ್ನು ಯಾಕಾಗಿ ಹಿಂಪಡೆದರು  ಎಂದು ರಮೇಶ್ ಚೆನ್ನಿತ್ತಲ ಕೇಳಿದರು. ಇದೆಲ್ಲವನ್ನೂ ಗಮನಿಸಿಯೂ ಮುಖ್ಯಮಂತ್ರಿ ಮೌನ ಕಾಯ್ದುಕೊಂಡಿದ್ದಾರೆ. ತಮ್ಮ ಜೊತೆಗಿರುವವರ ಸಾಚಾತನವನ್ನು ಮುಖ್ಯಮಂತ್ರಿ ಗಂಭೀರವಾಗಿ ಗಮನಿಸಬೇಕು ಎಂದು ಚೆನ್ನಿತ್ತಲ ಹೇಳಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries