ಕಾಸರಗೋಡು: ಮಹಿಳಾ ಸೌಹಾರ್ದ ಕೇಂದ್ರ ಶೀ ಲಾಂಜ್ ಚೆರುವತ್ತೂರು ಪೇಟೆಯಲ್ಲಿ ಉದ್ಘಾಟನೆಗೊಂಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ, ಜಿಲ್ಲಾ ಪಂಚಾಯತ್ ಸದಸ್ಯ ಸಿ.ಬಿ. ಪ್ರಮೀಳಾ, ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ವೆಂಗಾಟ್ ಕುಂಞÂ್ಞ ರಾಮನ್, ಚೆರುವತ್ತೂರು ಗ್ರಾಮ ಪಂಚಾಯತ್ ನ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಒ.ಬಿ.ನಾರಾಯಣನ್, ಎಂ.ವಿ.ಜಯಶ್ರೀ, ಸಿ.ಡಿ.ಎಸ್.ಅಧ್ಯಕ್ಷೆ ರೀನಾ, ಸಹಾಯಕ ಇಂಜಿನಿಯರ್ ಅನಾ ಸೂರ್ಯ, ಚೆರುವತ್ತೂರು ಗ್ರಾಮ ಪಂಚಾಯತ್ ಸಹಾಯಕ ಕಾರ್ಯದರ್ಶಿ ಕೆ.ನಾರಾಯಣನ್, ಗುಮಾಸ್ತ ಎಂ.ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಚೆರುವತ್ತೂರು ಪಟ್ಟಣದಲ್ಲಿ ಈ ಕೇಂದ್ರವಿದೆ. ದೂರದಿಂದ ವಿವಿಧ ಉದ್ದೇಶಗಳಿಗೆ ಆಗಮಿಸುವ ಮಹಿಳೆಯರಿಗೆ ವಿಶ್ರಾಂತಿ ಸೌಲಭ್ಯ, ಮಕ್ಕಳಿಗೆ ಎದೆಹಾಲುಣಿಸುವ ಕೇಂದ್ರ, ಮಹಿಳಾ ಸೌಹಾರ್ದ ಶೌಚಾಲಯಗಳು, ಸಂರಕ್ಷಣೆ ವ್ಯವಸ್ಥೆ ಹೀಗೆ ಅನೇಕ ಸೌಲಭ್ಯಗಳು ಈ ಶೀ ಲಾಂಜ್ ನಲ್ಲಿವೆ.
ದೀರ್ಘಗಾಮಿಗಳಾಗಿ ಕಾಸರಗೋಡು ಜಿಲ್ಲೆಗೆ ಆಗಮಿಸುವ ಮಹಿಳೆಯರಿಗೆ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಮಹಿಳಾ ಸೌಹಾರ್ದ ಕೇಂದ್ರಗಳನ್ನು ಸ್ಥಾಪಿಸುವ ಜಿಲ್ಲಾ ಪಂಚಾಯತ್ ನ ಯೋಜನೆ ಪ್ರಕಾರ ಚೆರುವತ್ತೂರು ಪೇಟೆಯಲ್ಲಿ ಶೀ ಲಾಂಜ್ ನಿರ್ಮಿಸಲಾಗಿದೆ. ಪಂಚಾಯತ್ ಸ್ವಂತ ನಿಧಿಯಿಂದ 1100000 ರೂ., ಜಿಲ್ಲಾ ಪಂಚಾಯತ್ ನಿಂದ 400000 ರೂ. ಬಳಸಿ ಈ ಕೇಂದ್ರ ನಿರ್ಮಿಸಲಾಗಿದೆ.




