ಕಾಸರಗೋಡ: ಕೋಡೋ-ಬೇಳೂರು ಗ್ರಾಮ ಪಂಚಾಯತ್ ನ ಕ್ಲೀನಿಪ್ಪಾರದ ಪರಿಶಿಷ್ಟ ಪಂಗಡ ಕಾಲನಿಯಲ್ಲಿ ಬ್ರಿಜ್ ಕೋರ್ಸ್ ಸೆಂಟರ್ ಆರಂಭಗೊಂಡಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಕುಂuಟಿಜeಜಿiಟಿeಜಕಣ್ಣನ್ ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿದ್ದರು. ಸಹಾಯಕ ಜಿಲ್ಲಾ ಸಂಚಾಲಕ ಪ್ರಕಾಶನ್ ಪಾಲಾಯಿ, ವಾರ್ಡ್ ಸದಸ್ಯೆ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.
ಪರಿಶಿಷ್ಟ ಪಂಗಡ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ, ಶಾಲೆಗಳಲ್ಲಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುವ, ಉನ್ನತ ಶಿಕ್ಷಣ ಒದಗಿಸುವ ಇತ್ಯಾದಿ ಸದುದ್ದೇಶಗಳೊಂದಿಗೆ ಈ ಸೆಂಟರ್ ಯೋಜನೆ ಪ್ರಾರಂಭಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 8 ನೇ ಸೆಂಟರ್ ಈ ಮೂಲಕ ಆರಂಭಗೊಳ್ಳುತ್ತಿದೆ.
ಕ್ಲೀನಿಪ್ಪಾರ ಪ್ರದೇಶದಲ್ಲಿ ಈಗ 41 ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಈ ಮಕ್ಕಳ ಕಲಿಕೆಗೆ ಸಹಕಾರಿಯಾಗುವ ವ್ಯಕ್ತಿತ್ವ ವಿಕಸನ ತರಬೇತಿ ಇತ್ಯಾದಿಗಳು ಈ ಸೆಂಟರ್ ಮೂಲಕ ಲಭಿಸಲಿದೆ. ಯಾವ ಪ್ರದೇಶದಲ್ಲಿ ಬ್ರಿಜ್ ಕೋರ್ಸ್ ಸೆಂಟರ್ ಆರಂಭಗೊಳ್ಳುತ್ತದೋ, ಅದೇ ಪ್ರದೇಶದ ಶಿಕ್ಷಿತ ಮಂದಿಗೆ ಉದ್ಯೋಗಾವಕಾಸವೂ ಈ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.




