ಕಾಸರಗೋಡು: ಚೆರುವತ್ತೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಚಟುವಟಿಕೆ ನಡೆಸುವ ಕಾಡಂಗೋಡಿನಲ್ಲಿ ನಿರ್ಮಾಣಗೊಂಡಿರುವ ಬ್ಲೋಸಂ ಬಡ್ಸ್ ಶಾಲೆ ಉದ್ಘಾಟನೆಗೊಂಡಿದೆ.
ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಿ.ವಿ.ಪ್ರಮೀಳಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ನಾರಾಯಣನ್, ಕೆ.ವಿ.ಕುಂuಟಿಜeಜಿiಟಿeಜರಾಮನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ ಮಂಜೂರು ಗೊಂಡಿರುವ 11 ಬಡ್ಸ್ ಶಾಲೆಗಳಲ್ಲಿ ಪೂರ್ಣಗೊಂಡಿರುವ ಸಂಸ್ಥೆಗಳಲ್ಲಿ 4 ಶಾಲೆಗಳಲ್ಲಿ ಒಂದಾಗಿರುವ ಬ್ಲೋಸಂ ಬಡ್ಸ್ ಶಾಲೆ ಚೆರುವತ್ತೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕಾಡಂಗೋಡಿನಲ್ಲಿ ಶುಭಾರಂಭಗೊಂಡಿದೆ. ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗಾಗಿರುವ ವಿಶೇಷ ಶಾಲೆಯೇ ಈ ಬಡ್ಸ್ ಸ್ಕೂಲ್ ಗಳು.
ಗ್ರಾಮ ಪಂಚಾಯತ್ ನ 2017-18 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ 35 ಲಕ್ಷ ರೂ. ವೆಚ್ಚದಲ್ಲಿ ಬ್ಲೋಸಂ ಬಡ್ಸ್ ಶಾಲೆ ನಿರ್ಮಾಣಗೊಂಡಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಬಲ್ಲಿ ಜಿಲ್ಲಾ ಮಿಷನ್ ಅಂಗವಾಗಿ 12.5 ಲಕ್ಷ ರೂ. ಲಭಿಸಿದೆ. ಎರಡು ತರಗತಿ ಕೊಠಡಿಗಳು, ಎರಡು ಶೌಚಾಲಯಗಳು, ವಿಶಾಲ ಹಾಲ್, ಅಡುಗೆಮನೆಯನ್ನೂ ಈ ನೂತನ ಕಟ್ಟಡ ಹೊಂದಿದೆ.
ಈಗ 25 ಮಕ್ಕಳು ಇಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಒಬ್ಬ ಶಿಕ್ಷಕಿ, ಇಬ್ಬರು ಆಯಾಗಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಕ್ಕಳ ಚಿಕಿತ್ಸೆಗೆ ಥೆರಪಿಸ್ಟ್ ಒಬ್ಬರನ್ನೂ ನೇಮಿಸಲಾಗುವುದು. ಸ್ವ ಉದ್ಯೋಗ ತರಬೇತಿ ಆರಂಭಿಸುವ ಯೋಜನೆಯೂ ಇದೆ ಎಂದು ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ತಿಳಿಸಿದರು.





