ಬದಿಯಡ್ಕ: ಕುಂಬ್ಡಾಜೆ ಪಂಚಾಯತ್ ನ ಬೆಳಿಂಜ ಸಮೀಪದ ಆಲಿಂಜ ಪರಿಸರದಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸುಮಾರು ಒಂದು ಗಂಟೆಯ ತನಕ ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ಇಂದು ನಡೆದಿದೆ.
ವಿಷಯ ಗಮನಕ್ಕೆ ಬರುತ್ತಿರುವಂತೆ ತಕ್ಷಣ ಆಗಮಿಸಿದ ಊರವರ ಸಹಕಾರದಿಂದ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ.
ಬಿರುಸಿನ ಮಳೆಯಿಂದಾಗಿ ಬೆಳಿಂಜ - ಆಲಿಂಜ ಪರಿಸರದಲ್ಲಿ ಹಲವಾರು ಕಡೆ ಗುಡ್ಡೆ ಕುಸಿತದ ಭೀತಿಯಲ್ಲಿದೆ. ಸಾರ್ವಜನಿಕರು ಸಂಚರಿಸುವಾಗ ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.





