ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೆ.13ರಂದು ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ಅತಿ ಪ್ರಬಲ ಮಳೆ ಸುರಿಯುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ಘೋಷಣೆ ನಡೆಸಲಾಗಿದೆ. ಈ ಅವಧಿಯಲ್ಲಿ ಪ್ರಾಕೃತಿಕ ದುರಂತಗಳು ನಡೆಯುವ ಸಾಧ್ಯತೆಯ ಕಾರಣ ಸಾರ್ವಜನಿಕರು ಜಾಗರೂಕರಾಗಿರುವಂತೆ ತಿಳಿಸಲಾಗಿದೆ.
ತುರ್ತು ಪರಿಸ್ಥಿಯಲ್ಲಿ ತಾಲುಕು ಮಟ್ಟದ ನಿಯಂತ್ರಣ ಕೊಠಡಿಗಳಿಗೆ ಕರೆಮಾಡಿ:
ಪ್ರಾಕೃತಿಕ ದುರಂತ ನಡೆದಲ್ಲಿ ಸಂಬಂಧಪಟ್ಟ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಟುವಟಿಕೆ ನಡೆಸುವ ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳು ಚಟುವಟಿಕೆ ನಡೆಸುತ್ತಿವೆ. ಸಾರ್ವಜನಿಕರು ಸೇವೆಗಾಗಿ ಕರೆಮಾಡಬಹುದು. ಕಾಸರಗೋಡು: 04994230021, ಮಂಜೇಶ್ವರ: 04998 244044, ಹೊಸದುರ್ಗ: 0467 2204042, ವೆಳ್ಳರಿಕುಂಡ್ : 04672242320.



