ಕಾಸರಗೋಡು: ರಾಜ್ಯ ಸಿವಿಲ್ ಸಪ್ಲೈ ನಿಗಮ ನೀಲೇಶ್ವರ ನಗರಸಭೆಯಲ್ಲಿ ಮಂಜೂರು ಮಾಡಿರುವ ಎರಡನೇ ಮಾವೇಲಿ ಸೂಪರ್ ಮಾರ್ಕೆಟ್ ಉದ್ಘಾಟನೆಗೊಂಡಿದೆ.
ನಗರಸಭೆ ಪತ್ತೆಮಾಡಿರುವ ಅತಿ ವಿಶಾಲವಾದ ಕಟ್ಟಡದಲ್ಲಿ ಈ ಸೂಪರ್ ಮಾರ್ಕೆಟ್ ಆರಂಭಗೊಂಡಿದೆ. ಈ ಕಟ್ಟಡದ ಬಾಡಿಗೆ ನಗರಸಭೆ ಸಲ್ಲಿಸಲಿದೆ. ಪೀಠೋಕರಣ, ಕಂಪ್ಯೂಟರ್ ಸಜ್ಜೀಕರಣ, ಭಂಡವಾಳ ನಿಧಿಯನ್ನು ನಗರಸಭೆ ಈ ಹಿಂದೆಯೇ ಸಲ್ಲಿಸಿದೆ.
ಶಾಸಕ ಎಂ.ರಾಜಗೋಪಾಲನ್ ಸೂಪರ್ ಮಾರ್ಕೆಟ್ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ.ಗೌರಿ ಮೊದಲ ಮಾರಾಟ ನಡೆಸಿದರು. ವಾರ್ಡ್ ಸದಸ್ಯ ಪಿ.ಮನೋಹರನ್, ಸದಸ್ಯರಾದ ಎರವಾಡ್ ಮೋಹನನ್, ಪಿ.ಭಾರ್ಗವಿ, ಎಂ.ವಿ.ವನಜಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಪ್ಲೈ ಕೋ ಏರಿಯಾ ಮೆನೆಜರ್ ದಿನೇಶನ್ ಸ್ವಾಗತಿಸಿದರು. ತಾಲೂಕು ಸಪ್ಲೈ ಆಫೀಸರ್ ಕೆ.ಎಂ.ಬಿಂದು ವಂದಿಸಿದರು.


