ಕಾಸರಗೋಡು: ಪೋಷಕಾಹಾರಗಳ ಬಗ್ಗೆ ಸುಲಭದಲ್ಲಿ ಮನನವಾಗುವಂತೆ ಮಾಹಿತಿ ನೀಡುತ್ತಿರುವ ಅಂಗನವಾಡಿಗಳು ಸಾಮಾಜಿಕವಾಗಿ ಬಹಳ ದೊಡ್ಡ ಯೋಗದಾನ ನೀಡುತ್ತಿವೆ.
ಪೋಷಣ್ ಅಭಿಯಾನ್ ಯೋಜನೆ ಮೂಲಕ ಪೋಷಕಾಹಾರ ಮಾಸಾಚರಣೆ ಅಂಗವಾಗಿ ಆಯಾ ದಿನಗಳನ್ನು ಬಣ್ಣಗಳ ಮೂಲಕ ವಿಂಗಡಿಸಿ ಮಕ್ಕಳಿಗೆ, ಅವರ ಕುಟುಂಬದ ಸದಸ್ಯರಿಗೆ ಪೋಷಕಾಹಾರದ ಮಹತ್ವದ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಕಾಸರಗೋಡು ಜಿಲ್ಲಾ ಐ.ಸಿ.ಡಿ.ಎಸ್. ಪೋಗ್ರಾಂ ಆಫೀಸ್ ನೇತೃತ್ವದಲ್ಲಿ ವಿವಿಧ ಅಂಗನವಾಡಿಗಳಲ್ಲಿ ಈ ಕಾಯಕ ನಡೆದುಬರುತ್ತಿದೆ.
ಈ ಸರಣಿಯ ಮೊದಲ ದಿನವಾದ ಶನಿವಾರವನ್ನು "ನೇರಳೆ(ವಯಲೆಟ್) ಬಣ್ಣದ ದಿನ" ಎಂದು ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆ ಎಲ್ಲ ಅಂಗನವಾಡಿಗಳಲ್ಲಿ ನೇರಳೆ ಬಣ್ಣದ ತರಕಾರಿ, ಹಣ್ಣು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮಕ್ಕಳಿಗೂ ನೇರಳೆ ಬಣ್ಣದ ಉಡುಪು ಧರಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಇಂಡಿಗೋ, ನೀಲ,, ಹಸುರು, ಹಳದಿ, ಕಿತ್ತಳೆ, ಕೆಂಪು ಇತ್ಯಾದಿ ಬಣ್ಣಗಳಲ್ಲಿ ದಿನಗಳನ್ನು ವಿಂಗಡಿಸಲಾಗುವುದು. ತಿಂಗಳ ಕೊನೆಯಲ್ಲಿ ಕಾಮನಬಿಲ್ಲಿನ ರೀತಿ ಎಲ್ಲ ಬಣ್ಣಗಳನ್ನು ಬಳಸಿರುವ ಪೋಷಕಾಹಾರ ಬಗ್ಗೆ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಚಿತ್ರ ಮಾಹಿತಿ: ಅಂಗನವಾಡಿ: ಮಧೂರು ಗ್ರಾಮ ಪಂಚಾಯತ್ ನ ಭಗವತಿ ನಗರದಲ್ಲಿ ನೇರಳೆ ಬಣ್ಣದ ಪೆÇೀಷಕಾಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿರುವುದು.





