HEALTH TIPS

ಮಾಸ್ಟರ್ ಯೋಜನೆ: ವಿಭಿನ್ನ ದೃಷ್ಟಿಕೋನದೊಂದಿಗೆ ಸಿದ್ಧಗೊಂಡಿರುವ ಕುತ್ತಿಕೋಲು ಗ್ರಾಮ ಪಂಚಾಯತ್

   

        ಕಾಸರಗೋಡು: ಮಾಸ್ಟರ್ ಯೋಜನೆಯ ಮೂಲಕ ಕೊರೋನಾ ಪ್ರತಿರೋಧ ಚಟುವಟಿಕೆಗಳಿಗೆ ವಿನೂತನ ದೃಷ್ಟಿಕೋನದೊಂದಿಗೆ ಕುತ್ತಿಕೋಲು ಗ್ರಾಮ ಪಂಚಾಯತ್ ರಣಗಕ್ಕಿಳಿದಿದೆ. 

       ರೇಡಿಯೋ ಸಹಿತ ಸೌಲಭ್ಯಗಳನ್ನು ಈ ನಿಟ್ಟಿನಲ್ಲಿ ಗರಿಷ್ಟ ಮಟ್ಟದಲ್ಲಿ ಬಳಸಿಕೊಂಡು ಜನಜಾಗೃತಿ ನಡೆಸುವ ತಯಾರಿ ಇಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಜನಜಾಗೃತಿ ಸಮಿತಿ, ಮಾಸ್ಟರ್ ಯೋಜನೆಯ ಕಾರ್ಯಕರ್ತರಾಗಿರುವ ಶಿಕ್ಷಕರ ನೇತೃತ್ವದಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ. 

     ಸಾಮಾಜಿಕ ಜಾಲತಾಣಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಕಲಾಪ್ರಕಾರಗಳ ರೂಪದಲ್ಲಿ ಜನಜಾಗೃತಿ ಮೂಡಿಸುವ ವೀಡಿಯೋ(ದೃಶ್ಯ ಮಾಧ್ಯಮಗಳ) ಮೂಲಕ ಗರಿಷ್ಟ ಮಟ್ಟದಲ್ಲಿ ಕಲಾವಿದರೂ ಈ ಪ್ರತಿರೋಧ ಚಟುವಟಿಕೆಗಳ ಕಾರ್ಯಕರ್ತರಾಗಲಿದ್ದಾರೆ. ಕಾಸರಗೋಡು ಜಿಲ್ಲೆಯ ಮತ್ತು ಇತರ ಕಡೆಗಳ ಕಲಾವಿದರು ಈ ನಿಟ್ಟಿನಲ್ಲಿ ಸಹಕಾರ ನೀಡಲಿದ್ದಾರೆ. ವಿಕ್ಟರ್ಸ್ ಚಾನೆಲ್ ನಲ್ಲಿ ಆನ್ ಲೈನ್ ತರಗತಿ ನಡೆಸುತ್ತಿರುವ ಶಿಕ್ಷಕರು ಮತ್ತು ಚಲನಚಿತ್ರ ವಲಯದಲ್ಲಿ ತೊಡಗಿಕೊಂಡಿರುವ ಕಲಾವಿದರು ಈ ದೌತ್ಯದಲ್ಲಿ ಭಾಗಿಗಳಾಗುವರು.

      ಸರಕಾರದ ಆದೇಶಗಳು, ಕಟ್ಟುನಿಟ್ಟುಗಳು, ಆರೋಗ್ಯ ಇಲಾಖೆಯ ಸಲಹೆಗಳು ಇತ್ಯಾದಿಗಳನ್ನು ಜನತೆಗೆ ತಲಪಿಸಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವ, ಟಿ.ವಿ. ಮಾಧ್ಯಮಕ್ಕೆ ಸಮಾನವಾಗಿ ಚಟುವಟಿಕೆ ನಡೆಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಸೇವೆಯನ್ನೂ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸತತ ಯತ್ನ ನಡೆಸಲಾಗುತ್ತಿದೆ ಎಂದು ಪಾಂಡಿ ಶಾಲೆಯ ಶಿಕ್ಷಕರಾಗಿರುವ ವಿಜಯ ಶಂಕರಂಪಾಡಿ ತಿಳಿಸಿದರು. ಅವರು ಕಾರ್ಯಕ್ರಮಗಳಿಗೆ ಅಗತ್ಯವಿರುವ ತಾಂತ್ರಿಕ ಸಹಾಯ ಒದಗಿಸುತ್ತಿದ್ದಾರೆ. ಇದಕ್ಕೆ ಬೇಕಿರುವ ನಿಧಿ ಪೂರೈಕೆ ಮತ್ತಿತರ ಸಹಾಯವನ್ನು ಗ್ರಾಮ ಪಂಚಾಯತ್ ಒದಗಿಸುತ್ತದೆ. 

   ಸುಮಾರು 10 ವೀಡಿಯೋಗಳು ಈಗಾಗಲೇ ಈಗಾಗಲೇ ತಯಾರಾಗಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ನ ಗಡಿ ಪ್ರದೇಶಗಳಲ್ಲಿ ಮತ್ತು ಗಡಿಯಿಂದಾಚೆಗಿನ ಪ್ರದೇಶಗಳಲ್ಲೂ ಈ ಸಂದೇಶ ಪಸರಿಸುವ ವೀಡಿಯೋಗಳು ಸಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಲಾಗುವುದು ಎಂದವರು ಅಭಿಪ್ರಾಯಪಟ್ಟರು. 

    ಕುತ್ತಿಕೋಲು ಗ್ರಾಮ ಪಂಚಾಯತ್ ಜಾಗ್ರತಾ ಸಮಿತಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳ ಲಾಂಛನ ಬಿಡುಗಡೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಲಾಂಛನ ಬಿಡುಗಡೆ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಜೆ. ಲಿಝಿ, ಉಪಾಧ್ಯಕ್ಷ ಪಿ.ಗೋಪಿನಾಥನ್, ಪಾಂಡಿ ಶಾಲೆಯ ಶಿಕ್ಷಕ ವಿಜಯ ಶಂಕರಂಪಾಡಿ, ಹಿರಿಯ ವರಿಷ್ಠಾಧಿಕಾರಿ ಕೆ.ಜಿ.ಮೋಹನ್, ಸಹಾಯಕ ನೋಡೆಲ್ ಅಧಿಕಾರಿ ವಿದ್ಯಾ ಪಿ.ಸಿ. ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries