ತಿರುವನಂತಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಜಯಗಳಿಸಿದರೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಈ ಹುದ್ದೆಗೆ ಕೇಳಿಬರುತ್ತಿದೆ. ಆದರೆ ವಿಶೇಷವೆಂಬಂತೆ ಸ್ವತ: ಉಮ್ಮನ್ ಚಂಡಿಯವರೇ ರಂಗಕ್ಕೆ ಬಂದಿದ್ದು ಅವರು ಮಾಧ್ಯಮವೊಂದರೊಂದಿಗೆ ಇಂದು ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದಿರುವುದು ಹುಬ್ಬೇರಿಸುವಂತೆ ಮಾಡಿದೆ.
ರಮೇಶ್ ಚೆನ್ನಿತ್ತಲ ಮುಖ್ಯಮಂತ್ರಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ, ಉಮ್ಮನ್ ಚಾಂಡಿ ಅವರು ಮುಖ್ಯಮಂತ್ರಿಯಾಗಲು ಅವರೂ ಅರ್ಹರು ಎನ್ನುವುದು ನಿಜ. ಆದರೆ ಅದನ್ನು ನಿರ್ಧರಿಸುವುದು ಕೇಂದ್ರ ನಾಯಕತ್ವಕ್ಕೆ ಬಿಟ್ಟದ್ದು ಎಂದು ಹೇಳಿದರು.ಆದರೆ ತಾನು ಮತ್ತೆ ಅಸೆಂಬ್ಲಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳಾಗುವುದನ್ನು ನಿರಾಕರಿಸಿಲ್ಲ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಈಗಾಗಲೇ ಎದ್ದಿದೆ. ಉಮ್ಮನ್ ಚಾಂಡಿ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಮತ್ತು ಉಭಯ ನಾಯಕರನ್ನು ಹೊರತುಪಡಿಸಿ ಬೇರೆ ಯಾರಾದರೂ ಈ ಹುದ್ದೆಗೆ ಏರುತ್ತಾರೆಯೇ ಎಂದು ರಮೇಶ್ ಚೆನ್ನಿತ್ತಲ ಸಹಿತ ಎಲ್ಲರೂ ಪಕ್ಷದ ಪ್ರತಿಕ್ರಿಯೆಗೆ ರಾಜ್ಯ ರಾಜಕಾರಣ ನೋಡುತ್ತಿದೆ.
ಕಾಂಗ್ರೆಸ್ ಕೇಂದ್ರ ನಾಯಕತ್ವದ ವಿರುದ್ಧದ ಪತ್ರ ವಿವಾದಕ್ಕೆ ಪ್ರತಿಕ್ರಿಯಿಸಿದ ಉಮ್ಮನ್ ಚಾಂಡಿ, ಪತ್ರ ಬರೆದ ನಾಯಕರು ತಪ್ಪಿತಸ್ಥರಲ್ಲ ಎಂದು ಹೇಳಿದರು. ವಿವಾದದ ಸಂದರ್ಭದಲ್ಲಿ ಕೆ ಕರುಣಕರನ್ ಅವರನ್ನು ದೂಷಿಸಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ತಪ್ಪುಗಳನ್ನು ಸರಿಪಡಿಸಲು ಹಿಂಜರಿಯುತ್ತಿದ್ದಾರೆ ಎಂದು ಚಾಂಡಿ ಟೀಕಿಸಿದರು. ಆದರೆ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ದೂಷಿಸುವುದಿಲ್ಲ ಎಂದು ಹೇಳಿದರು.





