HEALTH TIPS

ಮಂಜೇಶ್ವರ ಶಾಸಕ ಮಂಜೇಶ್ವರಕ್ಕೆ ಅವಮಾನ-ವಂಚನೆ ನಡೆಸಿದವರು ಜನನಾಯಕರಾಗಲು ಅಯೋಗ್ಯ-ನ್ಯಾಯವಾದಿ ಕೆ.ಶ್ರೀಕಾಂತ್

 

            ಮಂಜೇಶ್ವರ: 146 ಕೋಟಿ ರೂ.ವಂಚನೆ ಪ್ರಕರಣದ ಆರೋಪಿ, ತನ್ನ ಮಾಲಿಕತ್ವದ ಸಂಸ್ಥೆಯ ಹೆಸರಲ್ಲಿ ಜನತೆಯಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸಿ ನಕಲಿ ಜುವೆಲ್ಲರಿ ಗಳನ್ನು ಸ್ಥಾಪಿಸಿ ಕಳ್ಳರ ಗುರು ಮಂಜೇಶ್ವರ ಶಾಸಕರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು, ಶಾಸಕರನ್ನು ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ನೇತೃತ್ವದಲ್ಲಿ ಏಕದಿನ ಉಪವಾಸ ಸತ್ಯಾಗ್ರಹ ಹೊಸಂಗಡಿ ಪ್ರೇರಣ ಸಭಾಂಗಣದಲ್ಲಿ ಮಂಗಳವಾರ ಜರಗಿತು. ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪರ ಅಧ್ಯಕ್ಷತೆ ವಹಿಸಿದ್ದರು.

      ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ.ಕೆ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕøತಿ ಮತ್ತು ಭಾಷಾ ವೈವಿಧ್ಯತೆಗಳಿಗೆ ಹೆಸರಾದ ಮಂಜೇಶ್ವರದ  ಶಾಸಕರಾಗಿ ಎಂ ಸಿ ಕಮರುದ್ದೀನ್ ಕಳಂಕ ಎಂದು ಶ್ರೀಕಾಂತ್ ಆಗ್ರಹಿಸಿದರು.ವಂಚಕನಾದ ವ್ಯಕ್ತಿಗೆ ಜನನಾಯಕನಾಗಲು ಅರ್ಹತೆಯಿಲ್ಲ.  ನೈತಿಕತೆ ಎಂಬುವುದು ಇದ್ದರೆ ಐಕ್ಯರಂಗ ರಾಜೀನಾಮೆ ನೀಡಬೇಕು, ಹಾಗೂ ವಂಚನೆ ಮಾಡಿರುವ ಒಟ್ಟು ಮೊತ್ತ ಜನತೆಗೆ ತಿಳಿಸಬೇಕು. ನಕಲಿ ದಾಖಲೆ ಸೃಷ್ಟಿಸಿ ಕಂಪೆನಿ ತೆರೆದಿರುವುದೇ ವಂಚನೆ ಮಾಡಲು. ಇದು ವಂಚನೆಯ ಬೃಹತ್ ಜಾಲವಾಗಿದ್ದು ವಂಚನೆ ಪ್ರಕರಣ ಮುಚ್ಚಿ ಹಾಕಲು ಕೇರಳ ರಾಜ್ಯ ಸರ್ಕಾರ ಮುಸ್ಲಿಂ ಲೀಗ್ ನೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಕರಣವನ್ನೇ ಮುಚ್ಚಿ ಹಾಕಲು ತಂತ್ರ ಹೂಡಿದೆ. ಇದರಿಂದ ಶಾಸಕರ ಬಂಧನವಾಗಿಲ್ಲ, ಸರ್ಕಾರ ತನಿಖೆ ನಡೆಸದೆ ಶಾಸಕರ ಜತೆಗೂಡಿ ಜನತೆಯನ್ನು ವಂಚಿಸುತ್ತಿದೆ ಎಂದು ಶ್ರೀಕಾಂತ್ ಆರೋಪಿಸಿದರು.

        ಮುಸ್ಲಿಂ ಲೀಗ್ ಇದೀಗ ಮೋಸದ ಲೀಗ್ ಆಗಿದೆ.ವಂಚನೆಯೇ ಇವರ ಕಾಯಕ.ಅಧಿಕಾರ ದುರುಪಯೋಗದ ಮೂಲಕ ಜನತೆಯನ್ನು ವಂಚಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ದೂರಿದೆ.

          ಮುಖಂಡರಾದ ಸುರೇಶ್ ಶೆಟ್ಟಿ, ಸತೀಶ್ಚಂದ್ರ ಭಂಡಾರಿ  ಕೋಳಾರು, ಪುಷ್ಪ ಅಮ್ಮೆಕಳ, ಸವಿತಾ ಬಾಳಿಕೆ, ಎ.ಕೆ. ಕಯ್ಯಾರು, ಚಂದ್ರಕಾಂತ್ ಶೆಟ್ಟಿ, ನವೀನ್ ರಾಜ್, ಚಂದ್ರಹಾಸ ಪೂಜಾರಿ, ಅನಿಲ್ ಮಣಿಯಂಪಾರೆ, ಪ್ರಜ್ವಿತ್ ಶೆಟ್ಟಿ, ಬಾಬು ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ ಸ್ವಾಗತಿಸಿ, ಸಂತೋಷ್ ದೈಗೊಳಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries